April 12, 2025

ವಿಟ್ಲ: ಅಕ್ರಮ ದನ ಸಾಗಾಟ: ಇಬ್ಬರು ಆರೋಪಿಗಳ ಬಂಧನ

0

ವಿಟ್ಲ: ಠಾಣಾ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳು ರೌಂಡ್ಸ್ ನಲ್ಲಿದ್ದ ವೇಳೆ ಅಕ್ರಮ ದನ ಸಾಗಾಟ ಮಾಡುತ್ತಿದ್ದ ಬಗ್ಗೆ ಕಂಡು ಬಂದಿದ್ದು, ಜಾನುವಾರು, ಇಬ್ಬರು ಆರೋಪಿಗಳನ್ನು ಮತ್ತು ವಶಕ್ಕೆ ಪಡೆದ ಘಟನೆ ಪುಣಚದ ಕೊಲ್ಲಪದವು ಎಂಬಲ್ಲಿ ನಡೆದಿದೆ.

ನಾರಾಯಣ ನಾಯ್ಕ್ ಮತ್ತು ಸಂತೋಷ್ ಕುಮಾರ್ ಬಂಧಿತರು.

ಆ.31 ರಂದು ರಾತ್ರಿ ವಿಟ್ಲ ಠಾಣಾ ನಿರೀಕ್ಷಕರಾದ ನಾಗರಾಜ್ ಹೆಚ್. ಇ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ವಾಹನ ತಪಾಸಣೆ ಮಾಡುತ್ತಿದ್ದಾಗ ಕೊಲ್ಲ ಪದವು ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಶರವು ಕಡೆಯಿಂದ ಸಾರಡ್ಕ ಕಡೆಗೆ ಓಮ್ನಿ ಕಾರಿನಲ್ಲಿ ಆರೋಪಿಗಳು ಗಂಡು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಕೈ ಕಾಲು ಕಟ್ಟಿ ಕೇರಳ ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.

 

 

ನಸು ಕೆಂಪು ಬಣ್ಣದ ದನದ ಗಂಡು ಕರುವಿನ ಅಂದಾಜು ಮೌಲ್ಯ ಸುಮಾರು 2000/- ರೂ ಗಳು, ಓಮ್ನಿ ಕಾರಿನ ಅಂದಾಜು ಮೌಲ್ಯ ಸುಮಾರು ಸುಮಾರು 1,50,000/- ರೂ ಗಳು. ಸ್ವಾಧೀನಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 1,52,000/- ಆಗಿದೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 137/2022 ಕಲಂ:5,6,7,12 KARNATAKA PREVENTION OF COW SLANGHTER & CATTLE PREVENTION ACT 2020 ಮತ್ತು ಕಲಂ: 11(1) (A),11(1 ) (D) PREVENTION OF CRUELTY TO ANIMALS ACT, 1960 ರಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!