ಮೋದಿ ಕಾರ್ಯಕ್ರಮಕ್ಕೆ ಬಸ್ ಬುಕ್: ಸಾರಿಗೆ ವ್ಯವಸ್ಥೆ ಇಲ್ಲದೆ ವಿಟ್ಲ, ಬಂಟ್ವಾಳ ಜನರ ಪರದಾಟ

ವಿಟ್ಲ: ಮಂಗಳೂರಿಗೆ ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹೆಚ್ಚಿನ ಬಸ್‌ಗಳು ಹಾಗೂ ಖಾಸಗಿ ಬಸ್ ಗಳು ಕರಾರು ಒಪ್ಪಂದದ ಮೇರೆಗೆ ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಶುಕ್ರವಾರ ವಿಟ್ಲ, ಬಂಟ್ವಾಳದ ಸಾರ್ವಜನಿಕರು ಪರದಾಟ ನಡೆಸಿದರು.

ಜಿಲ್ಲೆಯ ವಿವಿಧ ಬಸ್ ನಿಲ್ದಾಣಗಳಿಂದ ಬೇರೆ ಬೇರೆ ಕಡೆಗಳಿಗೆ ಸಂಚರಿಸಬೇಕಿದ್ದ ಬಸ್‌ಗಳ ಕೊರತೆಯಾಗಿದ್ದರಿಂದ ದೈನಂದಿನ ಕೆಲಸಗಳಿಗೆ ಹೋಗುವವರಿಗೆ ಸಮಸ್ಯೆ ಉಂಟಾಗಿತ್ತು.

ಬೆಳಿಗ್ಗೆ ಕಚೇರಿಯ ಸಮಯ, ಇತರೆ ಕೆಲಸಗಳಿಗೆ ಹೋಗಬೇಕಿದ್ದವರು, ಮನೆಗೆ ಮರಳಬೇಕಿದ್ದವರು ತಡಹೊತ್ತು ಬಸ್ ನಿಲ್ದಾಣದಲ್ಲಿ ಕಾದು ಕಾದು ಸುಸ್ತಾದರು.
ಆಗೊಮ್ಮೆ ಬಿಟ್ಟು ಬಿಟ್ಟು ಒಂದೊಂದೆ ಬಸ್‌ಗಳು ಬರುತ್ತಿದ್ದವು. ಬಸ್‌ಗಳು ನಿಲ್ದಾಣದೊಳಗೆ ಬರುತ್ತಿದ್ದಂತೆ ಜನ ನೊಣಗಳಂತೆ ಮುತ್ತಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರದ ಕಾರಣ ಸಾರ್ವಜನಿಕರು ಆಟೊ ಹಾಗೂ ಬೈಕ್‌ಗಳಲ್ಲಿ ಸಂಚರಿಸಿದರು.