April 11, 2025

ಗಣೇಶನಿಗೂ ದೊಡ್ಡ ಗಾತ್ರದ ಆಧಾರ್‌ ಕಾರ್ಡ್‌!

0

ಜಾರ್ಖಂಡ್‌: ವಿಘ್ನ ನಿವಾರಕನ ಮೂರ್ತಿಯನ್ನು ಒಂದೊಂದು ಪ್ರದೇಶದಲ್ಲಿ ವಿಭಿನ್ನ ವಿನ್ಯಾಸದೊಂದಿಗೆ ರಚಿಸಿ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಜಾರ್ಖಂಡ್‌ನ ಜೆಮ್‌ಶೇಡ್‌ಪುರದಲ್ಲಿ ಜನರು ಗಣೇಶನಿಗೆ ದೊಡ್ಡ ಗಾತ್ರದ ಆಧಾರ್‌ ಕಾರ್ಡ್‌ ಅನ್ನು ಸಿದ್ದಪಡಿಸಲಾಗಿದೆ.

ಈ ಆಧಾರ್‌ ಕಾರ್ಡ್‌ನಲ್ಲಿರುವ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಗಣೇಶನ ಚಿತ್ರಗಳ ಗೂಗಲ್ ಲಿಂಕ್ ಪರದೆಯ ಮೇಲೆ ತೆರೆಯುತ್ತದೆ. ಅದರಲ್ಲಿ ನಮೂದಿಸಲಾದ ವಿಳಾಸವು ಶ್ರೀ ಗಣೇಶ್ S/o ಮಹಾದೇವ್, ಕೈಲಾಶ್ ಪರ್ವತದ ತುದಿ, ಮಾನಸರೋವರ, ಕೈಲಾಸ ಇದರ ಜೊತೆಗೆ 000001 ಪಿನ್‌ಕೋಡ್ ಮತ್ತು ಹುಟ್ಟಿದ ವರ್ಷ 01/01/600CE ಎಂದು ನಮೂದಿಸಲಾಗಿದೆ.

ಗಣೇಶನ ಪೆಂಡಾಲ್‌ನ ಆಯೋಜಕ ಸರವ್ ಕುಮಾರ್ ಮಾತನಾಡಿ, ಕೋಲ್ಕತಾಕ್ಕೆ ಒಮ್ಮೆ ಭೇಟಿ ನೀಡಿದ ಸಂದರ್ಭ ಫೇಸ್‌ಬುಕ್‌ ಥೀಮ್ ಅನ್ನು ಇಟ್ಟುಕೊಂಡು ತಯಾರಿಸಲಾಗಿದ್ದ ಗಣೇಶನನ್ನು ನೋಡಿದ್ದೆ. ಅದನ್ನು ಕಂಡು ಆಧಾರ್ ಕಾರ್ಡ್-ಥೀಮ್ ಪೆಂಡಾಲ್ ತಯಾರಿಸುವ ಆಲೋಚನೆ ನನಗೆ ಬಂದಿತು. “ದೇವರು ಆಧಾರ್ ಕಾರ್ಡ್ ಹೊಂದಿದ್ದರೆ, ಅದನ್ನು ನೋಡಿದ  ಜನರು ಸ್ಫೂರ್ತಿ ಪಡೆಯಬಹುದು ಮತ್ತು ಅದನ್ನು ಅನುಸರಿಸಬಹುದು” ಎಂದಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!