March 25, 2026

ಚಲಿಸುತ್ತಿದ್ದ ಬಸ್‌ನಿಂದ ಬಿದ್ದ ಶಾಲಾ ವಿದ್ಯಾರ್ಥಿ

0
image_editor_output_image236382265-1662034424834.jpg

ತಮಿಳುನಾಡು: ಕಿಕ್ಕಿರಿದು ತುಂಬಿದ್ದ ಚಲಿಸುತ್ತಿದ್ದ ಬಸ್‌ನಿಂದ ಶಾಲಾ ವಿದ್ಯಾರ್ಥಿಯೊಬ್ಬರು ಹಿಡಿತ ತಪ್ಪಿ ಬೀಳುತ್ತಿರುವ ಭಯಾನಕ ವಿಡಿಯೋವೊಂದು ವೈರಲ್ ಆಗಿದೆ.

ಟ್ವಿಟರ್ ಪೋಸ್ಟ್ ಪ್ರಕಾರ, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ .ಟ್ವಿಟರ್ ಬಳಕೆದಾರರಾದ ಎ ಸೆಂಥಿಲ್ ಕುಮಾರ್ ಅವರು ಮೂಲತಃ ಹಂಚಿಕೊಂಡಿರುವ ಸಣ್ಣ ವಿಡಿಯೋ ಕ್ಲಿಪ್ ನಲ್ಲಿ , ಬಸ್ಸಿನ ಸಾಮರ್ಥ್ಯಕ್ಕಿಂತ ಅತಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡಿದ್ದು, ಜನ ಬಾಗಿಲಿನಲ್ಲಿ ನೇತಾಡುತ್ತಿರುವ ಕಾರಣ ಬಸ್ ಎಡಕ್ಕೆ ವಾಲಿರುವುದನ್ನು ತೋರಿಸಿದೆ. ಈ ವೇಳೆ ಚಲಿಸುತ್ತಿದ್ದ ಬಸ್ಸಿನಿಂದ, ಶಾಲಾ ಸಮವಸ್ತ್ರವನ್ನು ಧರಿಸಿದ್ದ ಹುಡುಗ ರಸ್ತೆಯ ಮೇಲೆ ಜಾರಿಬಿದ್ದಿದ್ದಾನೆ.

ಈ ವೇಳೆ ಹಿಂದಿನಿಂದ ಬರುತ್ತಿದ್ದ ವಾಹನ ವಾಹನ ವೇಗ ಕಡಿಮೆ ಇದ್ದುದರಿಂದ ಬಾಲಕನ ಮೇಲೆ ಹರಿಯುವುದು ತಪ್ಪಿದೆ. ನೆಲಕ್ಕೆ ಬಿದ್ದ ವಿದ್ಯಾರ್ಥಿ ನಿಲ್ಲಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!