ಉಳ್ಳಾಲದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮುಂಬೈ ಚರಂಡಿಯಲ್ಲಿ ಪತ್ತೆ
ಉಳ್ಳಾಲ: ನಗರ ಹೊರವಲಯ ಉಳ್ಳಾಲದ ಯುವಕನೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬೃಹತ್ ಚರಂಡಿಯಲ್ಲಿ ಪತ್ತೆಯಾದ ಘಟನೆ ಮುಂಬೈನ ವಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತದೇಹದ ಜೇಬಿನಲ್ಲಿ ಸಿಕ್ಕ ಚುನಾವಣಾ ಗುರುತಿನ ಚೀಟಿಯ ಆಧಾರದಲ್ಲಿ ಉಳ್ಳಾಲ ಗುತ್ತು ಬಂಡಿಕೊಟ್ಯ ನಿವಾಸಿ ಸುಂದರ ಎಂಬವರ ಪುತ್ರ ಸುಧೀರ್ ಕುಮಾರ್(32) ಎಂದು ಗುರುತಿಸಲಾಗಿದೆ.
ಆಗಸ್ಟ್14ರಂದು ಕಾಣೆಯಾಗಿದ್ದ ಸುಧೀರ್ ಅವರ ಬಗ್ಗೆ ಮುಂಬೈಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.





