January 31, 2026

ಪದೇ ಪದೇ ಮೂತ್ರ ಮಾಡುತ್ತಿದ್ದ ಬಾಲಕ: ಬೆಂಕಿ ಕಡ್ಡಿ ಹೊತ್ತಿಸಿ ಬಾಲಕನ ಖಾಸಗಿ ಅಂಗವನ್ನು ಸುಟ್ಟ ಅಂಗನವಾಡಿ ಶಿಕ್ಷಕಿ

0
image_editor_output_image-729003270-1661926708903.jpg

ತುಮಕೂರು: ವಿಲಕ್ಷಣಕಾರಿ ಘಟನೆಯೊಂದರಲ್ಲಿ ಆಗಾಗ್ಗೆ ಪ್ಯಾಂಟ್  ಒದೆ ಮಾಡಿಕೊಳ್ಳುತ್ತಿದ್ದ ಮೂರು ವರ್ಷದ ಬಾಲಕನ ಮಾರ್ಮಾಂಗವನ್ನು ಸುಟ್ಟಿರುವ ಘಟನೆ ನಡೆದಿದೆ. 28 ವರ್ಷದ ಸಹಾಯಕ ಶಿಕ್ಷಕಿ ರಶ್ಮಿ ಬೆಂಕಿ ಕಡ್ಡಿ ಹೊತ್ತಿಸಿ ಅಪ್ರಾಪ್ತ ಬಾಲಕನ ಖಾಸಗಿ ಅಂಗವನ್ನು ಸುಟ್ಟಿರುವುದಾಗಿ ವರದಿಯಾಗಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಗೊಡೆಕೆರೆಯ ಅಂಗನವಾಡಿ ಕೇಂದ್ರವೊಂದರಲ್ಲಿ ವಾರದ ಹಿಂದೆ ಈ ಘಟನೆ ನಡೆದಿದ್ದು ಸೋಮವಾರ ಬಾಲಕನ ಅಜ್ಜಿ ಸ್ನಾನ ಮಾಡಿಸುತ್ತಿರುವಾಗ ಘಟನೆ ಬೆಳಕಿಗೆ ಬಂದಿದೆ.

ಬಾಲಕನ ಜನನಾಂಗದ ಮೇಲೆ ಸುಟ್ಟ ಗಾಯವಾಗಿರುವುದನ್ನು ಅರ್ಜಿ ಗಮನಿಸಿದ್ದಾರೆ. ನಂತರ ಬಾಲಕನ ಕುಟುಂಬದವರು ಈ ವಿಷಯವನ್ನು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪವಿತ್ರಾ ಅವರ ಗಮನಕ್ಕೆ ತಂದಿದ್ದಾರೆ. 

ಆದಾಗ್ಯೂ, ಆರೋಪಿ ರಶ್ಮಿ ವಿರುದ್ಧ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್ ಎಂ.ಎಸ್ ಮಾತನಾಡಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿರುವುದಾಗಿ ತಿಳಿಸಿದರು. 

Leave a Reply

Your email address will not be published. Required fields are marked *

error: Content is protected !!