February 3, 2026

ಕಾರು ಹೊಂದಿದವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ: ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ

0
image_editor_output_image-2125952994-1661686672973

ಶಿವಮೊಗ್ಗ: ಇನ್ನು ಮುಂದೆ ಕಾರು ಹೊಂದಿದವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಮುರುಘಾ ಮಠದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಈಗ 50,000 ರೂ. ಹಾಗೂ 1 ಲಕ್ಷ ರೂಪಾಯಿಗೆ ಹಳೆಯ ಕಾರುಗಳು ಸಿಗುತ್ತವೆ. ಗಾರೆ ಮಾಡುವವರು ಮತ್ತು ಮೀನು ಹಿಡಿಯುವವರು ಕೂಡಾ ಕಾರು ತೆಗೆದುಕೊಂಡು ಹೋಗುತ್ತಾರೆ. ಅಂಥವರ ಕಾರ್ಡ್‌ ಕೂಡಾ ರದ್ದಾಗಿರುವುದು ಸರಿಯಲ್ಲ. ಈ ವಿಷಯವಾಗಿ ಶಾಸಕ ಎಚ್‌. ಹರತಾಳು ಹಾಲಪ್ಪ ಮತ್ತು ನಾನು ಮುಖ್ಯಮಂತ್ರಿ ಜತೆ ಚರ್ಚಿಸಿದ್ದೇವೆ.

ಈಗಿರುವ ಕಾನೂನಿನಿಂದ ಬಡವರು ಹೊಂದಿರುವ ಕಾರ್ಡ್‌ ರದ್ದಾಗುತ್ತದೆ. ಅವರ ಜೀವನಾಧಾರಕ್ಕೆ ತೊಂದರೆ ಆಗುತ್ತದೆ ಎಂದು ಮನವರಿಕೆ ಮಾಡಿದ್ದೇವೆ. ಬಡವರ ಮೇಲೆ ಕರುಣೆ ತೋರಿ ಮುಖ್ಯ ಮಂತ್ರಿ ಆದೇಶ ಹೊರಡಿಸುತ್ತಾರೆ ಎಂಬ ಅಶಾವಾದ ಇದೆ ಎಂದರು.

Leave a Reply

Your email address will not be published. Required fields are marked *

error: Content is protected !!