ಬುಡೋಳಿ: ಮೀನು ಸಾಗಾಟ ಲಾರಿ ಮತ್ತು ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ: ಕೂದಳೆಲೆ ಅಂತರದಲ್ಲಿ ತಪ್ಪಿದ ಭಾರೀ ದುರಂತ
ಮಾಣಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸೇತುವೆ ಸಮೀಪ ಮೀನಿನ ಲಾರಿ ಮತ್ತು ಟ್ಯಾಂಕರ್ ಲಾರಿ ಮುಖಾಮುಖಿ ಹೊಡೆದಿದ್ದು, ಭಾರೀ ದುರಂತಯೊಂದು ತಪ್ಪಿದೆ.
ಬೆಂಗಳೂರು ಕಡೆಗೆ ಹೋಗುತ್ತಿದ್ದ ಮೀನಿನ ಲಾರಿ, ಮಂಗಳೂರಿಗೆ ಹೋಗುತ್ತಿದ್ದ ಟ್ಯಾಂಕರ್ ನಡುವೆ ಈ ಅಪಘಾತ ಸಂಭವಿಸಿದೆ.
ಘಟನೆಯಿಂದ ಮೀನಿನ ಲಾರಿ ಸೇತುವೆಯ ಮೇಲಿಂದ ಕೆಳಗೆ ಬೀಳುವ ಹಂತದಲ್ಲಿದ್ದು, ಕೂದಳೆಲೆ ಅಂತರದಿಂದ ಪಾರಾಗಿದೆ. ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು.






