August 12, 2026

ವಿಟ್ಲ: ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ 360 ವಿದ್ಯಾರ್ಥಿಗಳಿಗೆ 19.40ಲಕ್ಷ ವಿದ್ಯಾರ್ಥಿ ವೇತನ ವಿತರಣೆ: ವಿಠಲ ಪದವಿ ಪೂರ್ವ ಕಾಲೇಜ್ ನಲ್ಲಿ ಆಯೋಜನೆ

0
IMG-20220828-WA0022

ವಿಟ್ಲ: 360 ವಿದ್ಯಾರ್ಥಿಗಳಿಗೆ 19.40ಲಕ್ಷ ವಿದ್ಯಾರ್ಥಿ ವೇತನ ವಿತರಣೆ
ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ 360 ವಿದ್ಯಾರ್ಥಿಗಳಿಗೆ 19.40ಲಕ್ಷ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಬೆಂಗಳೂರು ಸುಪ್ರಜಿತ್ ಫೌಂಡೇಶನ್ ನ ಅಜಿತ್ ಕುಮಾರ್ ರೈ ವಿದ್ಯಾರ್ಥಿ ವೇತನ ವಿತರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ ಹುಟ್ಟಿದ ಊರು, ಕಲಿತ ಶಾಲೆ ನಮಗೆ ಹೆಮ್ಮೆ. ಆ ಕಾರಣದಿಂದ ಬಂಟ್ವಾಳ ತಾಲೂಕಿನ 10ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನೆಲೆಯಿಂದ 11ವರ್ಷದಿಂದ ಮಾಡುತಿದ್ದೇವೆ. ಯೋಜನೆಗೆ ಹಣದ ಅವಶ್ಯಕತೆಗಿಂತಲೂ ಹೆಚ್ಚು ಪಲಾನುಭವಿಗಳ ಆಯ್ಕೆಯ ಯೋಜನೆ ಅವಶ್ಯಕ. ಉನ್ನತ ಸಾಧನೆ ಮಾಡುತ್ತಿರುವ ವಿದ್ಯಾರ್ಥಿನಿಯರು ಉನ್ನತ ವೃತ್ತಿ ಕ್ಷೇತ್ರಗಳಲ್ಲಿಯೂ ಸಾಧನೆ ಇರಲಿ ಇದಕ್ಕೆ ಈ ಯೋಜನೆ ಪೂರಕವಾಗಲಿ ಎಂದರು.

ವಿದ್ಯಾರ್ಥಿ ವೇತನ ಪರಿಶೀಲನೆ ಮಾಡಿದವರನ್ನು ಗೌರವಿಸಲಾಯಿತು. ವಿಠಲ ವಿದ್ಯಾ ಸಂಘ ಸಂಚಾಲಕ ಎಲ್. ಎನ್. ಕೂಡೂರು, ವಿಠಲ ಸುಪ್ರಜಿತ್ ಐಟಿಐ ಸಂಚಾಲಕ ಅಲ್ಫಾನ್ಸೋ ಸಿಲ್ವೆಸ್ಟರ್ ಮಸ್ಕರೇನ್ಹಸ್, ವಿಠಲ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ , ಉದ್ಯಮಿ ಸುಬ್ರಯ ಪೈ, ವಿಠಲ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಿರಣ್ ಕುಮಾರ್, ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು, ಕುಮಾರ ಸುಬ್ರಹ್ಮಣ್ಯ ಶಾಸ್ತ್ರೀ, ರಮೇಶ್ ಬಿ. ಕೆ., ಶ್ರೀಪತಿ ನಾಯಕ್, ರಾಜಶೇಖರ, ಪ್ರಕಾಶ್ ನಾಯಕ್, ಅಣ್ಣಪ್ಪ ಶಾಸ್ತಾನ, ಮೋಹನ್ ಭಾಗವಹಿಸಿದ್ದರು.

ವಿಠಲ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸ್ವಾಗತಿಸಿದರು. ಉದ್ಯಮಿ ಸುಬ್ರಯ ಪೈ ಪ್ರಸ್ತಾವನೆಗೈದರು. ಕುಮಾರ ಸುಬ್ರಹ್ಮಣ್ಯ ಶಾಸ್ತ್ರೀ, ರಮೇಶ್ ಬಿ. ಕೆ. ಶ್ರೀಪತಿ ನಾಯಕ್, ರಾಜಶೇಖರ, ಪ್ರಕಾಶ್ ನಾಯಕ್, ಅಣ್ಣಪ್ಪ ಶಾಸ್ತಾನ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿಠಲ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ವಂದಿಸಿದರು. ರಾಧಾಕೃಷ್ಣ ಎರುಂಬು ನಿರೂಪಿಸಿದರು.ಮೋಹನ್ ಬಿ ಸಹಕರಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!