May 11, 2026

ಉಪ್ಪಿನಂಗಡಿ: ಮರಳು ಸಾಗಾಟದ ಟಿಪ್ಪರ್ ಅಡಿಗೆ ಬಿದ್ದ ಆಕ್ಟೀವಾ ವಾಹನ: ಇಬ್ಬರಿಗೆ ಗಾಯ

0
IMG-20220825-WA0093

ಉಪ್ಪಿನಂಗಡಿ: ಮರಳು ಸಾಗಿಸುವ ಟಿಪ್ಪರ್ ನ ಅಡಿಗೆ ಆಕ್ಟಿವಾ ಬಿದ್ದು, ಆಕ್ಟಿವಾದಲ್ಲಿದ್ದ ತಾಯಿ ಹಾಗೂ ಮಗ ಗಾಯಗೊಂಡ ಘಟನೆ ಆ.25 ರಂದು ಮಧ್ಯಾಹ್ನ ಬಜತ್ತೂರು ಗ್ರಾಮದ ಶಾಂತಿನಗರದಲ್ಲಿ ನಡೆದಿದೆ.

ನೂಜೋಲು ನಿವಾಸಿ ಕುಶಾಲಪ್ಪ ಹಾಗೂ ಅವರ ತಾಯಿ ಉಪ್ಪಿನಂಗಡಿಯಿಂದ ಆಕ್ಟಿವಾದಲ್ಲಿ ಮನೆಗೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಟಿಪ್ಪರ್ ಮಧ್ಯೆ ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಟಿಪ್ಪರ್ ನಡಿಗೆ ಬಿದ್ದಿದ್ದ ಆಕ್ಟಿವಾ ಚಾಲಕ ಕುಶಾಲಪ್ಪ ಹಾಗೂ ಅವರ ತಾಯಿಯನ್ನು ಹೊರ ತೆಗೆಯಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಗುಂಡಿಗೆ ಬಿದ್ದ ಟಿಪ್ಪರ್ ಅನ್ನು ಕ್ರೇನ್ ಮೂಲಕ ಹೊರ ತೆಗೆಯಲಾಗಿದ್ದು, ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!