February 4, 2026

ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಸಂಸದರ ಬದಲಾವಣೆಯ ಕೂಗು: ನಳಿನ್ ಕುಮಾರ್ ಕಟೀಲು ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ

0
image_editor_output_image1635986506-1661407879628.jpg

ಮಂಗಳೂರು: ಸೆ.02ರಂದು ಪ್ರಧಾನಿ ನರೇಂದ್ರ ಮೋದಿ  ಮಂಗಳೂರು ಭೇಟಿ ಹಿನ್ನೆಲೆ ನಳೀನ್ ಕುಮಾರ್ ಕಟೀಲ್ ವಿರುದ್ಧ ಅಭಿಯಾನ ಮಾಡಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸಂಸದ ಸ್ಥಾನ ಬದಲಿಸುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಮಾಡಲಾಗುತ್ತಿದ್ದು, ಸತ್ಯಜಿತ್ ಸುರತ್ಕಲ್ಗೆ ಸಂಸದ ಸ್ಥಾನ ಕೊಡಿ ಅಂತಾ ಪಟ್ಟು ಹಿಡಿಯಲಾಗಿದೆ.

ಹಿಂದುತ್ವದ ಜೊತೆಗೆ ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ನಾಯಕನ ಅಗತ್ಯವಿದೆ. ಮೋದಿ ಸ್ವಾಗತಿಸುವ ಮೊದಲು ಸಂಸದರ ಬದಲಾವಣೆಗೆ ಕೂಗು ಕೇಳಿ ಬರಲಿ ಅಂತಾ ಸಂದೇಶಗಳು ಹರಿದಾಡುತ್ತಿದ್ದು, ಇದಕ್ಕೆ ಪರ ಮತ್ತು ವಿರೋಧದ ಮೆಸೇಜ್ ಗಳು ಜೋರಾಗಿವೆ.

ಬಿಜೆಪಿ ಕಾರ್ಯಕರ್ತರ ‘ಪೋಸ್ಟ್ ಕಾರ್ಡ್’ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಭಿಯಾನಕ್ಕೆ ಕೈ ಹಾಕಿದೆ.

Leave a Reply

Your email address will not be published. Required fields are marked *

error: Content is protected !!