February 3, 2026

ಸುಳ್ಯ: ಕಾರು ಮತ್ತು ಲಾರಿ ನಡುವೆ ಅಪಘಾತ: ಕಾರು ಚಾಲಕ ಗಂಭೀರ

0
image_editor_output_image1662917539-1661230909882

ಸುಳ್ಯ :ಕಾರು ಹಾಗೂ ಲಾರಿ ಮಧ್ಯೆ ಪರಸ್ಪರ ಢಿಕ್ಕಿ ಸಂಭವಿಸಿ, ಕಾರು ಚಾಲಕನಿಗೆ ಗಂಭೀರ ಗಾಯವಾದ ಘಟನೆ ಕನಕಮಜಲು ಗ್ರಾಮದ ಕೋಡಿ ಎಂಬಲ್ಲಿ  ಬೆಳಿಗ್ಗೆ ಸಂಭವಿಸಿದೆ.

ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಕನಕಮಜಲಿನ ಕೋಡಿ ಎಂಬಲ್ಲಿ ದೊಡ್ಡ ತಿರುವಿನ ಬಳಿ ತಲುಪುತ್ತಿದ್ದಂತೆ ಸುಳ್ಯ ಕಡೆಯಿಂದ ಬಂದ ಲಾರಿಗೆ ಢಿಕ್ಕಿ ಹೊಡೆದಿದ್ದು, ಕಾರು ಚಾಲಕನ ಕಾಲಿಗೆ ಗಂಭೀರವಾಗಿ ಗಾಯವಾಗಿದೆ ತಿಳಿದುಬಂದಿದೆ.ಸ್ಥಳೀಯರು ಸೇರಿ ಗಾಯಾಳುವನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!