February 2, 2026

ಮಂಗಳೂರು: ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಲು ಯತ್ನ: ಆರೋಪಿ ಮೇಲೆ ಫೈರಿಂಗ್

0
Arrest1-1.jpg

ಮಂಗಳೂರು: ವಳಚ್ಚಿಲ್ ನಲ್ಲಿ ನಡೆದ ಕೊಲೆಯತ್ನ ಪ್ರಕರಣದ ಆರೋಪಿ ಎಮ್.ಡಿ.ಮುಸ್ತಾಕ್(26) ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಮಂಗಳೂರಿನ ವಳಚ್ಚಿಲ್ ನಲ್ಲಿ ಆಗಸ್ಟ್ ೧೯ ರಂದು ಮಿಸ್ತಾಹ್ ಎನ್ನುವ ಯುವಕನ ಮೇಲೆ ಆರೋಪಿ ಮುಸ್ತಾಕ್ ದಾಳಿ ಮಾಡಲು ಮುಂದಾಗಿದ್ದ ಈ ವೇಳೆ ಮಿಸ್ತಾಹ್ ನ ಮಾವ ಆಸಿಫ್ ತಡೆಯಲು ಬಂದಿದ್ದಕ್ಕೆ ಆಸಿಫ್ ಮೇಲೆ ಮುಸ್ತಾಕ್ ಕೊಲೆಯತ್ನಕ್ಕೆ ಯತ್ನಿಸಿದ್ದಾನೆ.

ಆರೋಪಿ ಮುಸ್ತಾಕ್ ನನ್ನು ಬಂಧಿಸಿದ ಪೊಲೀಸರು ಇಂದು ಮಂಗಳೂರು ಗ್ರಾಮಾಂತರ ಠಾಣ ವ್ಯಾಪ್ತಿಯ ಕಂಬಳ ಗ್ರಾಮದಲ್ಲಿ ಮಹಜರು ನಡೆಸುವ ವೇಳೆ ಪೊಲೀಸರು ಮೇಲೆ ಆಟ್ಯಾಕ್ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮುಸ್ತಾಕ್ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!