ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಕಾರು ಡಿಕ್ಕಿ: ಸೀಟು ಬೆಲ್ಟ್ ಧರಿಸಿದ್ದರಿಂದ ತಪ್ಪಿದ ಅನಾಹುತ
ವಿಟ್ಲ : ಸಮೀಪ ಚಂದಳಿಕೆ ಶಾಲೆಯ ಹತ್ತಿರ ಪುತ್ತೂರು ವಿಟ್ಲ ಮಾರ್ಗದ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದ ಘಟನೆ ರವಿವಾರ ರಾತ್ರಿ ನಡೆದಿದೆ. ಮೂರು ಜನ ಪ್ರಯಾಣಿಸುತ್ತಿದ್ದು ಸೀಟ್ ಬೆಲ್ಟ್ ಧರಿಸಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಖ್ಯಾತ ಫೋಟೋ ಗ್ರಾಫರ್ ಸದಾಶಿವ ಬನ(ಶಿಲ್ಪಿ) ಅವರಿಗೆ ಸೇರಿದ ಕಾರು ಇದಾಗಿದೆ.



