ಚೇಳೂರು: ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಕಾರಿಗೆ ಲಾರಿ ಢಿಕ್ಕಿ: ಮೂವರು ಗಂಭೀರ
ಚೇಳೂರು: ಹೋಬಳಿಯ ಬಿದರೆ ಕೆರೆ ಹಿಂಭಾಗ ಲಾರಿ ಮತ್ತು ಕಾರು ಮುಖಾಮುಖಿ ಢಿಕ್ಕಿಯಾಗಿ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಇತ್ತೀಚೆಗೆ ನಿಶ್ಚಿತಾರ್ಥವಾಗಿರುವ ಹುಡುಗ, ಹುಡುಗಿ ಜೊತೆಗೆ ಹುಡುಗಿಯ ತಂಗಿ ದೇವಾಲಯಕ್ಕೆ ತೆರಳುವಾಗ ಈ ಅಪಘಾತ ಸಂಭವಿಸಿದ್ದು, ಮೂವರೂ ಗಂಭೀರವಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ




