February 3, 2026

ಮೊಬೈಲ್‌ ಚಾರ್ಜ್‌ರ್‌ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಅಶ್ಲೀಲ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್‌ ಮೇಲ್‌: ವ್ಯಕ್ತಿಯ ಬಂಧನ

0
image_editor_output_image-1281873115-1661073280981.jpg

ಬೆಂಗಳೂರು: ಸಾರ್ವಜನಿಕರೇ ಮೊಬೈಲ್‌ ಚಾರ್ಜರ್‌ನಲ್ಲೂ ರಹಸ್ಯ ಕ್ಯಾಮೆರಾಗಳಿರುತ್ತವೆ ಎಚ್ಚರ. ಹೌದು, ಯುವತಿಯೊಬ್ಬಳ ಜತೆ ಲೈಂಗಿಕ ಸಂಪರ್ಕ ಬೆಳೆಸುವ ಉದ್ದೇಶದಿಂದ ಆಕೆಯ ಖಾಸಗಿ ಕೋಣೆಯಲ್ಲಿ ಮೊಬೈಲ್‌ ಜಾರ್ಜ್‌ರ್‌ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಅಶ್ಲೀಲ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್‌ ಮೇಲ್‌  ಮಾಡುತ್ತಿದ್ದ ವ್ಯಕ್ತಿಯೊಬ್ಬ ಈಶಾನ್ಯ ವಿಭಾಗದ ಪೊಲೀಸರ ಅತಿಥಿಯಾಗಿದ್ದಾನೆ. ‌

ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಮಹೇಶ್‌(30) ಬಂಧಿತ. ಆರೋಪಿಯಿಂದ ರಹಸ್ಯ ಕ್ಯಾಮೆರಾ ಅಳವಡಿಸಿದ್ದ ಮೊಬೈಲ್‌ ಚಾರ್ಜರ್‌, ಲ್ಯಾಪ್‌ಟಾಪ್‌, 2 ಮೆಮೊರಿ ಕಾರ್ಡ್‌, ಪೆನ್‌ಡ್ರೈವ್‌, 2 ಮೊಬೈಲ್‌ ಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ದೂರುದಾರ ಸಂತ್ರಸ್ತೆಯ ಪರಿಚಯಸ್ಥನಾಗಿದ್ದು, ಆಕೆಯ ಮನೆಗೆ ಬಂದಾಗ ರಹಸ್ಯ ಕ್ಯಾಮೆರಾ ಇಟ್ಟು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.

Leave a Reply

Your email address will not be published. Required fields are marked *

error: Content is protected !!