ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ವೇಷ ಧರಿಸಿದ ಮುಸ್ಲಿಂ ಬಾಲಕ
ಬಾಗೇಪಲ್ಲಿ: ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮಗುವಿಗೆ ಮುದ್ದು ಕೃಷ್ಣನ ವೇಷ ತೊಡಿಸಿದ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ.
ಬಾಗೇಪಲ್ಲಿಯ ಬ್ರೈಟ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಯ್ಯದ್ ಶಾಕೀಬ್ ಕೃಷ್ಣ ವೇಷಧಾರಿಯಾಗಿ ತಾಯಿ ರೇಷ್ಮಾ ಜತೆಯಲ್ಲಿದ್ದರು.
ನಾವು ಗೋಕುಲಾಷ್ಟಮಿ ಮತ್ತು ರಾಮ ನವಮಿಯನ್ನು ಆಚರಿಸುತ್ತೇವೆ. ಜತೆಗೆ ಈದ್-ಉಲ್-ಫಿತ್ರ, ಬಕ್ರೀದ್ ಅನ್ನೂ ಆಚರಿಸುತ್ತೇವೆ ಎಂದು ಬಾಲಕನ ತಂದೆ ಹೇಳಿದ್ದಾರೆ.




