February 3, 2026

ಶೀನಾ ಬೋರಾ ಹತ್ಯೆ ಪ್ರಕರಣ: ಆರೋಪಿ ಶ್ಯಾಮವರ್ ರಾಯ್‌ಗೆ ಜಾಮೀನು ಮಂಜೂರು

0
image_editor_output_image2012546760-1661056583097.jpg

ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿ ಶ್ಯಾಮವರ್ ರಾಯ್‌ಗೆ ಬಾಂಬೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.

ಪ್ರಕರಣದ ಪ್ರಮುಖ ಆರೋಪಿ ಶೀನಾ ಬೋರಾರ ತಾಯಿ ಇಂದ್ರಾಣಿ ಮುಖರ್ಜಿಯ ಕಾರು ಚಾಲಕನಾಗಿದ್ದ ಶ್ಯಾಮವರ್‌, ಹತ್ಯೆಯ ರಹಸ್ಯವನ್ನು ಮುಂಬೈ ಪೊಲೀಸರ ಎದುರು ಬಾಯ್ಬಿಟ್ಟಿದ್ದು, ಆತನ ಹೇಳಿಕೆ ಆಧಾರದಲ್ಲಿ 2015ರಲ್ಲಿ ಇಂದ್ರಾಣಿ, ಆತನ ಪತಿ ಸಂಜೀವ್‌ ಖನ್ನಾ ಅವರನ್ನು ಬಂಧಿಸಲಾಗಿತ್ತು.

ಇನ್ನು ಪೀಟರ್‌ ಮುಖರ್ಜಿ ಸೇರಿದಂತೆ ಪ್ರಕರಣದ ಇತರ ಆರೋಪಿಗಳೆಲ್ಲಾ ಜಾಮೀನಿನ ಮೇಲೆ ಈ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!