ಕೆಳ ಮಟ್ಟದ ಕಾಲುವೆಯಲ್ಲಿ ಗೆಳೆಯನೊಂದಿಗೆ ಈಜಲು ಹೋಗಿದ್ದ ಇಂಜಿನಿಯರ್ ನೀರುಪಾಲು
ಕುರುಗೋಡು : ಸಮೀಪದ ಬಸಾಪುರ ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ತುಂಗಭದ್ರಾ ಕೆಳ ಮಟ್ಟದ ಕಾಲುವೆಯಲ್ಲಿ ಗೆಳೆಯನೊಂದಿಗೆ ಈಜಲು ಹೋಗಿದ್ದ ವ್ಯಕ್ತಿ ನೀರಲ್ಲಿ ಮುಳುಗಿದ ಘಟನೆ ಕುರುಗೋಡು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನೀರಲ್ಲಿ ನಾಪತ್ತೆಯಾದ ವ್ಯಕ್ತಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ನಿರುಗುಂದ ಗ್ರಾಮದ ಆದರ್ಶ (32) ಎಂದು ಗುರುತಿಸಲಾಗಿದೆ.
ಅವರು ಬೆಂಗಳೂರಿನ ಐಟಿಸಿ ಇನ್ಫೋಟೆಕ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುದ್ದರು, ವಿಜಯಪುರದ ಗೋಳಗುಮ್ಮಟ ನೋಡಿಕೊಂಡು ಕುರುಗೋಡಲ್ಲಿ ಇದ್ದ ಗೆಳೆಯ ಭಾಷಾ ಮನೆಗೆ ಬಂದಿದ್ದ ಆದರ್ಶ ಬುಧವಾರ ಬೆಳಿಗ್ಗೆ ಈಜಲೆಂದು ಕಾಲುವೆಗೆ ಜಿಗಿದಿದ್ದು, ಮೇಲೆ ಬರಲೇ ಇಲ್ಲ. ಗೆಳೆಯ ಭಾಷಾ ಹುಡುಕಾಡಿ ಸಿಗದೇ ಇದ್ದಾಗ ಭಯಭಿತನಾಗಿ ಸ್ಥಳೀಯ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾನೆ.




