ಸ್ಕೂಟರ್ ನಲ್ಲೇ ತಾಯಿಯೊಂದಿಗೆ ತೀರ್ಥ ಯಾತ್ರೆಗೆ ಹೊರಟ ಕೃಷ್ಣಕುಮಾರ್: ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಭೇಟಿ ನೀಡಿದ ತಾಯಿ – ಮಗ
ಸುಳ್ಯ: ಯುವಜನತೆ ಪ್ರವಾಸ, ಸುತ್ತಾಟ, ದೂರ ಸಂಚಾರಕ್ಕೆ ತಮ್ಮ ಸ್ನೇಹಿತರು, ತಮ್ಮ ಒಡನಾಡಿಗಳೊಂದಿಗೆ ತೆರಳಿ ಸಂಭ್ರಮಿಸುವುದು ಪ್ರಸ್ತುತ ದಿನದಲ್ಲಿ ನಾವು ಕಾಣುತ್ತೇವೆ. ಆದರೆ ಮೈಸೂರಿನ ವ್ಯಕ್ತಿ ತನ್ನ ತಾಯಿಯೊಂದಿಗೆ ದೇಶ ಸುತ್ತುತ್ತಾ, ತೀರ್ಥ ಯಾತ್ರೆ ಮಾಡುತ್ತಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಯಾತ್ರೆಯಲ್ಲಿದ್ದಾರೆ.
ಮೈಸೂರಿನ ಕೃಷ್ಣಕುಮಾರ್(೪೪) ಹಾಗೂ ಅವರ ತಾಯಿ ಚೂಡ ರತ್ಮಮ್ಮ (೭೨) ಎಂಬವರು ಜೊತೆಯಾಗಿ ಸುತ್ತಾಟದಲ್ಲಿ ತೊಡಗಿದ್ದಾರೆ. ಸದ್ಯ ಇವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದಾರೆ
ಕೃಷ್ಣ ಕುಮಾರ್ ಅವರು ಉದ್ಯೋಗದಲ್ಲಿದ್ದು, ಕೆಲ ವರ್ಷಗಳ ಹಿಂದೆ ಉದ್ಯೋಗಕ್ಕೆ ರಾಜೀನಾಮೆ ನೀಡಿ ಋಷಿ ಜೀವನ ನಡೆಸುತ್ತಿದ್ದಾರೆ. ಅವಿವಾಹಿತರಾಗಿರುವ ಕೃಷ್ಣ ಕುಮಾರ್ ತಮ್ಮ ತಾಯಿಯ ಜತೆ ಜೀವನ ಕಳೆಯುತ್ತಿದ್ದು, ತಾಯಿಯ ಆಸೆಗಳನನ್ನು ಈಡೇರಿಸುತ್ತಿದ್ದಾರೆ. ಅದಕ್ಕಾಗಿಯೇ ತಾಯಿ ಆಸೆ ಪಡುವ ಕಡೆಗಳಿಗೆ ಕೃಷ್ಣ ಕುಮಾರ್ ಕರೆದೊಯ್ಯುತ್ತಿದ್ದಾರೆ.
೨೦೧೮ರಲ್ಲಿ ಮೈಸೂರಿನಿಂದ ಈ ತಾಯಿ, ಮಗ ಸುತ್ತಾಟ ಆರಂಭಿಸಿ ಸಮಗ್ರ ಭಾರತ ಸುತ್ತಿದ್ದಾರೆ. ಬಳಿಕ ನೇಪಾಳ, ಭೂತನ್, ಮಾಯನ್ಮಾರ್ ದೇಶಗಳಲ್ಲೂ ತಿರುಗಾಟ ನಡೆಸಿ ತಾಯಿಯ ಇಚ್ಚೆಯಂತೆ ನಡೆಸಿಕೊಂಡಿದ್ದಾರೆ. ಬಳಿಕ ಕೊರೊನಾ ಬಂದ ಪರಿಣಾಮ ಮೈಸೂರಿಗೆ ೨೦೨೦ರಲ್ಲಿ ಹಿಂದುರಿಗಿದ್ದು, ಬಳಿಕ ಸ್ಥಳೀಯವಾಘಿಯೇ ಸುತ್ತಾಟ ನಡೆಸುತ್ತಿದ್ದಾರೆ.ಈ ತಾಯಿ ಮಗ ಇದೀಗ ಮೈಸೂರಿನಿಂದ ಕುಶಾಲನಗರ, ಬಿಸ್ಲೆಘಾಟ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಶ್ರೀ ದೇವರ ದರುಶನ ಪಡೆದರು. ತಾಯಿಯ ಬೇಡಿಕೆಯಂತೆ ಕುಕ್ಕೆ ದರ್ಶನ ಮಾಡಲಾಗುತ್ತಿದೆ ಎನ್ನುತ್ತಾರೆ ಕೃಷ್ಣ ಕುಮಾರ್. ಕುಕ್ಕೆ ಯಿಂದ ಧರ್ಮಸ್ಥಳ, ಪುತ್ತೂರು ತೆರಳಿ ಬಳಿಕ ವಿಟ್ಲದ ಸಂಬಧಿಕರ (ತಾಯಿಯ ಸ್ನೇಹಿತೆ) ಮನೆಗೆ ತೆರಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ ಕೃಷ್ಣಕುಮಾರ್.
ಟ್ರಿಪ್ ಎಂದ ಕೂಡಲೇ ಕಾರಿನಲ್ಲಿ ಅಂದುಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ ಈ ತಾಯಿ ಮಗ ತಮ್ಮ ೨೦ ವರ್ಷಗಳ ಹಿಂದೆ ತಂದೆಯ ಕೊಡಿಸಿದ ಬಜಾಜ್ಚೇತಕ್ ಸ್ಕೂಟರ್ನಲ್ಲಿ ಪಯನ ನಡೆಸುತ್ತಿದ್ದಾರೆ. ಅದನ್ನೇ ತಂದೆ ಎಂದು ತಿಳಿದುಕೊಂಡು. ನಾವು ಮೂರು ಜನ ಒಟ್ಟಿಗೆ ಪ್ರಯನಿಸುತ್ತಿದ್ದೇವೆ ಎಂಬ ಭಾವನಯಂತೆ ಸಂಚರಿಸುತ್ತಿದ್ದೇವೆ ಎನ್ನುತ್ತಾರೆ ಕೃಷ್ಣ ಕುಮಾರ್.
ನನ್ನ ತಾಯಿ ೬೦ ವರ್ಷಗಳಿಗೂ ಹೆಚ್ಚು ನಾಲ್ಕು ಗೋಡೆಯ ಮಧ್ಯೆಯೇ ಜೀವನ ನಡೆಸುತತ್ತಿದ್ದರು, ಬೇರೆಲ್ಲೂ ಹೊರ ಜಗತ್ತು ಕಂಡವರಲ್ಲ.
ಇದೀಗ ನಾನು ನನ್ನ ಬ್ರಹ್ಮಚರ್ಯ ಜೀವನದಲ್ಲಿ ತಾಯಿಯ ಸಂದ್ಯಾಕಾಲದಲ್ಲಿ ಅವರ ಆಸೆಯಂತೆ ತೀರ್ಥ ಕ್ಷೇತ್ರಗಳಿಗೆ ಜತೆಯಾಗಿ ಸಂಚರಿಸುತ್ತಿದ್ದೇನೆ ಎನ್ನುವ ಕೃಷ್ಣ ಕುಮಾರ್ ಆಧ್ಮಾತ್ಮ ಬದುಕಿನಲ್ಲಿರುವ ನಾನು ಒಂದು ಕ್ಷೇತ್ರ, ಮಠ, ಮಂದಿರಗಳಿಗೆ ಭೇಟಿ ನೀಡಿದರೆ ಅಲ್ಲಿನ ಸಂಪೂರ್ಣ ಪರಿಸರ ಸುತ್ತಾಡಿಯೇ ಅಲ್ಲಿಂದ ತೆರಳುತ್ತೇನೆ ಎನ್ನುತ್ತಾರೆ. ದಕ್ಷಿಣ ಕನ್ನಡದ ಜನರು ತೆರೆದ ಹೃದಯಿಗಳು. ಮನೆಗೆ ಹೋದ ಕೂಡಲೇ ಅವರು ಹೊರಗಿನ ಜನತೆಯ ಮೇಲೆ ತೋರುವ ಪ್ರೀತಿ ಅಪಾರ, ಅದನ್ನು ಎಂದೂ ನಾವು ಮರೆಯುವಂತಿಲ್ಲ ಎಂದು ಹೇಳುತ್ತಾರೆ




