February 3, 2026

ಪುತ್ತೂರು: ಮಾದಕ ದ್ರವ್ಯ ಸೇವನೆ ಮಾಡಿ, ಅನುಮಾನಸ್ಪದವಾಗಿ ಓಡಾಟ:
ಆರೋಪಿ ಪೊಲೀಸ್ ವಶಕ್ಕೆ

0
image_editor_output_image226394148-1660791470993

ಪುತ್ತೂರು: ಕೆಯ್ಯೂರು ಎರಕ್ಕಳ ಎಂಬಲ್ಲಿ ಆಂಧ್ರಪ್ರದೇಶದ ನೋಂದಣಿಯ ಸ್ಕೋರ್ಪಿಯೊ ಕಾರೊಂದು ಅನುಮಾನಸ್ಪದವಾಗಿ ಓಡಾಡುತ್ತಿದೆ ಎಂಬ ಬಗ್ಗೆ ಸಾರ್ವಜನಿಕರ ಮಾಹಿತಿ ನೀಡಿದ್ದು, ಈ ಹಿನ್ನೆಲೆ ಕಾರು ಚಾಲಕನನ್ನು ವಿಚಾರಿಸಿದ ಸಂಪ್ಯ ಪೊಲೀಸರು ಚಾಲಕ ಮಾದಕ ದ್ರವ್ಯ ಸೇವನೆ ಮಾಡಿರುವ ಶಂಕೆಯಿಂದ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಘಟನೆ ನಡೆದಿದೆ.

ಕಾರು ಚಾಲಕ ಮಾದಕ ವಸ್ತು ಸೇವೆ ಮಾಡಿರುವುದಾಗಿ ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಬ ತಾಲೂಕಿನ ಪೆರಾಬೆ ಕೋಚಕಟ್ಟೆ ನಿವಾಸಿ ಇಬ್ರಾಹಿಂ‌ ಮುಸ್ಲಿಯಾರ್ ಅವರ ಪುತ್ರ ಮುಹಾದ್ ಪ್ರಾಯ ( 30) ಎಂಬಾತ ಮಾದಕ ವಸ್ತು ಗಾಂಜಾ ಸೇವಿಸಿರುವುದಾಗಿ ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಿದ್ದು. ಆರೋಪಿ ವಿರುದ್ದ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!