September 20, 2024

ಬಂಟ್ವಾಳ: ಪೋಕ್ಸೋ ಪ್ರಕರಣದ ಆರೋಪಿಗೆ ಮೂರು ವರ್ಷ ಶಿಕ್ಷೆ ಮತ್ತು 25 ಸಾವಿರ ರೂ. ದಂಡ

0

ಬಂಟ್ವಾಳ: ಪೋಕ್ಸೋ ಪ್ರಕರಣದ ಆರೋಪಿಗೆ ನ್ಯಾಯಾಲಯ ಮೂರು ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಿದೆ.

ವಿನ್ಸೆಂಟ್ ಪಿಂಟೋ ಅಲಿಯಾಸ್ ವಿನ್ಸೆಂಟ್ ರೋನಾಲ್ಡ ಪ್ರವೀಣ್ ಪಿಂಟೋ ಎಂಬಾತನೇ ಆರೋಪಿ. ಈತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ 36/2021 ಕಲಂ 376, 506 ಐಪಿಸಿ ಮತ್ತು 4&6 ಪೋಕ್ಸೋ (ಸ್ಪೇಷಲ್ ಕೇಸ್ 79/2021) ಪ್ರಕರಣ ದಾಖಲಾಗಿತ್ತು.

ವಿನ್ಸೆಂಟ್ ರೋನಾಲ್ಡ ಪ್ರವೀಣ್ ಪಿಂಟೋ ಎಂಬುವವನ ಮೇಲೆ ತನಿಖಾಧಿಕಾರಿಗಳಾದ ಶ್ರೀ. ಚೆಲುವಾರಾಜ ಪಿ. ಐ ರವರು ಹೆಚ್ಚುವರಿ ಜಿಲ್ಲಾ ಸತ್ರಾ ನ್ಯಾಯಾಲಯ FTSC-II (POCSO) ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈತನ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ರುಜುವಾಗಿದ್ದು, ಆರೋಪಿಗೆ ಕಲಂ 8 ಪೋಕ್ಸೋ ಕಾಯ್ದೆಯಡಿ ಮೂರು ವರ್ಷಗಳ ಕಠಿಣ ಶಿಕ್ಷೆ ಹಾಗೂ 25000 ರೂ. ದಂಡ ಮತ್ತು ಕಲಂ 506 ಐಪಿಸಿ ಅಡಿ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿದೆ.

Leave a Reply

Your email address will not be published. Required fields are marked *

error: Content is protected !!