March 25, 2026

ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ “How to face interview” ಕಾರ್ಯಾಗಾರ

0
IMG-20220817-WA0186

ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ “How to face interview” ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಪ್ರಾಂಶುಪಾಲರು, ಪ್ರಸ್ತುತ ಎಸ್.ಡಿ.ಎಮ್ ಪಿ.ಜಿ ಕಾಲೇಜಿನಲ್ಲಿ ಇಂಗ್ಲಿಷಿನ ಪ್ರಾಧ್ಯಾಪಕರಾದ ಶ್ರೀಯುತ ಡಾ.ಮಾಧವ ಭಟ್ ಆಗಮಿಸಿ ಅಂತಿಮ ಪದವಿ ವಿದ್ಯಾರ್ಥಿನಿಯರಿಗೆ ರೆಸ್ಯೂಮ್  ತಯಾರಿಸುವುದು ಹೇಗೆ ಮತ್ತು ಸಂದರ್ಶನವನ್ನು ಹೇಗೆ ಎದುರಿಸುವುದು  ಎಂಬ ವಿಷಯದಲ್ಲಿ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಬಿ.ಡಿ, ಉಪ ಪ್ರಾಂಶುಪಾಲರಾದ ಶ್ರೀಮತಿ  ಮಮಿತಾ  ಎಸ್.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಅಸೀಬ ಬಾನು ಕಿರಾತ್ ಪಠಿಸಿದರು. ಕು.ಫಾತಿಮ ನಸೀಫ ಸ್ವಾಗತಿಸಿ ವಂದಿಸಿದರು, ಕಾರ್ಯಕ್ರಮವನ್ನು ಕು.ಫಾತಿಮತ್ ಶಮುನ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!