March 25, 2026

ಮಂಗಳೂರು: ಕೊಟ್ಟಿಗೆಯಿಂದ ದನ ಕಳವು ಪ್ರಕರಣ: ಐದು ಮಂದಿ ಆರೋಪಿಗಳ ಬಂಧನ

0
image_editor_output_image-243076002-1660708502751

ಮಂಗಳೂರು: ಕೊಟ್ಟಿಗೆಯಿಂದ ದನ ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಮಂಗಳೂರಿನ ಕಂಕನಾಡಿ ನಗರ ಠಾಣಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.


ಇಲ್ಲಿನ ಬಜಾಲ್ ಗ್ರಾಮದ ದೋಟ ಹೌಸ್ ನಿವಾಸಿ ಅಶ್ವಿನಿ ಎಂಬವರು ತನ್ನ ಕಳೆದುಕೊಂಡವರಾಗಿದ್ದು, 22 ವರ್ಷದ ಬಂಗ್ಲಗುಡ್ಡೆಯ ಮುಹಮ್ಮದ್ ಅಶ್ಪಕ್ ಯಾನೆ ಶಮೀರ್ ಯಾನೆ ಶಮ್ಮಿ , 31 ವರ್ಷದ ಆದ್ಯಪಾಡಿಯ ಅಝರುದ್ದೀನ್ ಯಾನೆ ಅಝರ್ , 19 ವರ್ಷದ ಬಜಾಲ್ ಪಡ್ಪುವಿನ ಸುಹೈಲ್ , 25 ವರ್ಷದ ಬಜಾಲ್ ಪಕ್ಕಲಡ್ಕದ ಮುಹಮ್ಮದ್ ಅಫ್ರಿದಿ , 19 ವರ್ಷದ ಬಜಾಲ್ ಕಟ್ಟಪುಣಿಯ ಶಾಹಿದ ಯಾನೆ ಚಾಯಿ ಎಂಬವರನ್ನು ಬಂಧಿಸಲಾಗಿದೆ.


ಆರೋಪಿಗಳಿಂದ ಕಾರು, ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಜುಲೈ 20ರ ಸಂಜೆ 6ಕ್ಕೆ ದನವನ್ನು ಕೊಟ್ಟಿಗೆಯನ್ನು ಕಟ್ಟಿಹಾಕಲಾಗಿತ್ತು. ಜು.21 ಮುಂಜಾನೆ 3.30ರ ಸುಮಾರಿಗೆ 40 ಸಾವಿರ ರೂ. ಮೌಲ್ಯದ ದನ ಕಳವಾಗಿರುವುದನ್ನು ಅರಿತ ಅಶ್ವಿನ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!