March 25, 2026

ಅಮೂಲ್‌ ಹಾಲಿನ ದರದಲ್ಲಿ ಲೀಟರಿಗೆ 2 ರೂ. ಹೆಚ್ಚಳ

0
image_editor_output_image838297777-1660713186098.jpg

ಆನಂದ್: ಗುಜರಾತ್ ಸಹಕಾರ ಹಾಲು ಮಾರಾಟ ಮಹಾಮಂಡಳವು (ಜಿಸಿಎಂಎಂಎಫ್) ಅಮೂಲ್‌ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟ ಮಾಡುವ ಹಾಲಿನ ದರವನ್ನು ಲೀಟರಿಗೆ ₹ 2ರಷ್ಟು ಹೆಚ್ಚಿಸಿದೆ.

‘ಗೋಲ್ಡ್‌’, ‘ತಾಜಾ’ ಮತ್ತು ‘ಶಕ್ತಿ’ ಹೆಸರಿನಲ್ಲಿ ಮಾರಾಟವಾಗುವ ಹಾಲಿನ ಬೆಲೆ ಬುಧವಾರದಿಂದ ಜಾಸ್ತಿ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಕಾರಣ ಈ ಬೆಲೆ ಏರಿಕೆ ಎಂದು ಅದು ಹೇಳಿದೆ. ಒಂದು ವರ್ಷದಲ್ಲಿ ಪಶು ಆಹಾರದ ಬೆಲೆಯು ಸರಿಸುಮಾರು ಶೇಕಡ 20ರಷ್ಟು ಜಾಸ್ತಿ ಆಗಿದೆ ಎಂದು ಮಹಾಮಂಡಳವು ತಿಳಿಸಿದೆ. ಗ್ರಾಹಕರು ನೀಡುವ ಹಣದಲ್ಲಿ ಶೇ 80ರಷ್ಟನ್ನು ಅಮುಲ್, ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ.

Leave a Reply

Your email address will not be published. Required fields are marked *

error: Content is protected !!