November 17, 2026

ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲು

0
image_editor_output_image383340796-1794895021060

ಕಂಪ್ಲಿ: ತಾಲ್ಲೂಕಿನ ಬುಕ್ಕಸಾಗರ ಬಳಿಯ ಎಲ್‌ಎಲ್‌ಸಿ ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಈಜು ಬಾರದೆ ನೀರುಪಾಲಾದ ದಾರುಣ ಘಟನೆ ನ.16ರ ಸೋಮವಾರ ನಡೆದಿದೆ.

ಮೂಲತಃ ಕುರುಗೋಡು ತಾಲ್ಲೂಕಿನ ಎಚ್.ವೀರಾಪುರ ಗ್ರಾಮದವರಾದ ಇಬ್ಬರು ಬಾಲಕರು ಮೃತಪಟ್ಟ ದುರ್ದೈವಿಗಳು. ಮುನಿರಾಬಾದ್‌ನ ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗಿ ವಾಪಸ್ ಬಂದು, ಬುಕ್ಕಸಾಗರದ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದರು. ನಂತರ ಪಕ್ಕದಲ್ಲಿರುವ ಎಲ್‌ಎಲ್‌ಸಿ ಕಾಲುವೆಗೆ ಈಜಾಡಲು ಹೋಗಿದ್ದಾರೆ.

ಈ ವೇಳೆ ನೀರಿನ ಸುಳಿಗೆ ಸಿಲುಕಿ ಸತೀಶ್ ಮತ್ತು ಅನ್ನಪೂರ್ಣ ದಂಪತಿಯ ಮಗ ಮೌನೇಶ್ (16) ಹಾಗೂ ಫಕ್ಕೀರಪ್ಪ ಮತ್ತು ಸಣ್ಣ ಈರಮ್ಮ ದಂಪತಿಯ ಮಗ ಸೋಮಶೇಖರ್ (12) ಮೃತಪಟ್ಟಿದ್ದಾರೆ.

ಇಬ್ಬರ ಮೃತದೇಹಗಳನ್ನು ಮೂಲತಃ ಎಚ್.ವೀರಾಪುರ ಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಮನೆಗೆ ಶಾಸಕ ಜೆ.ಎನ್.ಗಣೇಶ್ ಭೇಟಿ ನೀಡಿ ಸಾಂತ್ವನ ಹೇಳಿ, ಸಹಾಯಧನ ನೀಡಿದರು.

Leave a Reply

Your email address will not be published. Required fields are marked *

error: Content is protected !!