March 25, 2026

ಬೈಕ್ ಗೆ ಕ್ಯಾಂಟರ್ ಢಿಕ್ಕಿ: ಬೈಕ್ ನಲ್ಲಿ ಸಂಚರಿಸುತ್ತಿದ್ದ ತಂದೆ, ಮಗ ಸಹಿತ ಮೂವರು ಸ್ಥಳದಲ್ಲೇ ಸಾವು

0
image_editor_output_image-1631161477-1660642097156.jpg

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಹೊಕ್ರಾಣಿ ಕ್ರಾಸ್ ಬಳಿ ರಾಜ್ಯಹೆದ್ದಾರಿಯಲ್ಲಿ ಬೈಕ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಸಂಚರಿಸುತ್ತಿದ್ದ ತಂದೆ, ಮಗ ಹಾಗೂ ಮಗುವಿನ ಚಿಕ್ಕಮ್ಮ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಪಕ್ಕದ ಕಲ್ಲೂರು ಗ್ರಾಮದ ಬಸವರಾಜ ಮಾಸಳಿ(40), ಭೀಮವ್ವ ಮಾಸಳಿ(50) ಹಾಗೂ ನರೇಶ್(8) ಮೃತರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುರ್ಡಿ ಗ್ರಾಮಕ್ಕೆ ಕಲ್ಲೂರಿನಿಂದ ಬೈಕ್ ನಲ್ಲಿ ಹೊಗುವಾಗ ಅಪಘಾತವಾಗಿದೆ. ಕ್ಯಾಂಟರ್ ಮಾನ್ವಿಯಿಂದ ರಾಯಚೂರಿಗೆ ಬರುತ್ತಿತ್ತು.‌

ಕ್ಯಾಂಟರ್ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ಕ್ಯಾಂಟರ್ ಪಕ್ಕದ ಜಮೀನಿಗೆ ನುಗ್ಗಿದೆ. ಮೃತ ದೇಹಗಳು ಜಮೀನಿನಲ್ಲಿ‌ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!