December 16, 2025

ಇಂಡೊ–ಟಿಬೆಟ್‌ ಗಡಿ ಪೊಲೀಸ್‌ ಪಡೆಯ ಸಿಬ್ಬಂದಿಯಿದ್ದ ಬಸ್‌ ಪಲ್ಟಿ: ಏಳು ಮಂದಿ ಮೃತ್ಯು

0
image_editor_output_image1846641239-1660641756457.jpg

ಶ್ರೀನಗರ: ಇಂಡೊ–ಟಿಬೆಟ್‌ ಗಡಿ ಪೊಲೀಸ್‌ ಪಡೆಯ 37 ಸಿಬ್ಬಂದಿ ಮತ್ತು ಇಬ್ಬರು ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಮಂಗಳವಾರ ಬ್ರೇಕ್‌ ವೈಫಲ್ಯದಿಂದ ನದಿಗೆ ಉರುಳಿಬಿದ್ದಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ.

ಇದರಲ್ಲಿ ಆರು ಮಂದಿ ಐಟಿಬಿಪಿ ಸಿಬ್ಬಂದಿಯಾದರೆ, ಒಬ್ಬರು ಪೊಲೀಸ್‌ ಇಲಾಖೆಯವರಾಗಿದ್ದಾರೆ. ಇನ್ನುಳಿದ 32 ಮಂದಿಗೂ ಗಾಯಗಳಾಗಿವೆ.

ಎಲ್ಲರೂ ಅಮರನಾಥದಲ್ಲಿ ಕರ್ತವ್ಯ ಮುಗಿಸಿಕೊಂಡು ಪೊಲೀಸ್‌ ಬಸ್‌ನಲ್ಲಿ ಪಾಲ್ಗಾಮ್‌ಗೆ ಮರಳುತ್ತಿದ್ಗರು. ಈ ವೇಳೆ ದುರಂತ ನಡೆದಿದೆ.

ಇಬ್ಬರು ಐಟಿಬಿಪಿ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ಐವರು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಐಟಿಬಿಪಿ ಸಿಬ್ಬಂದಿ ತಿಳಿಸಿದ್ದಾರೆ.

6 ಮಂದಿ ಐಟಿಬಿಪಿ ಸಿಬ್ಬಂದಿಯ ಪರಿಸ್ಥಿತಿ ಗಂಭೀರವಾಗಿದೆ. ವಿಶೇಷ ಚಿಕಿತ್ಸೆಗಾಗಿ ಅವರನ್ನು ಶ್ರೀನಗರಕ್ಕೆ ವಿಮಾನದಲ್ಲಿ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!