March 25, 2026

ವಿಟ್ಲ: ಸ್ವಾತಂತ್ರ್ಯದ ಅಮೃತ ಮಹೋತ್ಸವ: ಬದ್ರಿಯಾ ಜುಮಾ ಮಸೀದಿ ಉಕ್ಕುಡ ಇದರ ವಠಾರದಲ್ಲಿ ಮೇರಾ ವತನ್

0
IMG-20220815-WA0032

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬದ್ರಿಯಾ ಜುಮಾ ಮಸೀದಿ ಉಕ್ಕುಡ ಇದರ ವಠಾರದಲ್ಲಿ ಮೇರಾ ವತನ್ ಎಂಬ ಧ್ಯೇಯ ವಾಕ್ಯದೊಂದಿಗೆ ಬಹಳ ವಿಜ್ರಂಭಣೆಯಿಂದ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ನೂರುಲ್ ಹುದಾ ಮದರಸ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಮುಹ್ಯಿಸ್ಸುನ್ನ ದರ್ಸ್ ವಿದ್ಯಾರ್ಥಿಗಳು ಹಾಗೂ ನಾಡಿನ ಸಮಸ್ತ ನಾಗರಿಕರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ವಿಟ್ಲದ ಪ್ರತಿಷ್ಠಿತ ವೈದ್ಯರಾದ ಡಾಕ್ಟರ್ ವಿ ಕೆ ಹೆಗ್ಡೆರವರು ಧ್ವಜಾರೋಹಣವನ್ನು ನಡೆಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುದರ್ರಿಸರಾದ ಹಾಫಿಲ್ ಅಹ್ಮದ್ ಶರೀಫ್ ಸಖಾಫಿ ಮಳಲಿ ಉಸ್ತಾದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಶಿಕ್ಷಕರಾದ ಅಬ್ದುಲ್ ಹಮೀದ್ ಮದನಿ ಉಸ್ತಾದರು ಸ್ವಾಗತಿಸಿ ಅಲ್ ನೂರು ರಶೀದ್ ವಿಟ್ಲ ಸಂದೇಶ ಭಾಷಣವನ್ನು ಮಾಡಿದರು. ಮಸೀದಿ ಆಡಳಿತ ಕಮಿಟಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ THMA, ಪ್ರಧಾನ ಕಾರ್ಯದರ್ಶಿ U.S ಶರೀಫ್ ಸೇರಿದಂತೆ ನಾಡಿನ ಹಲವಾರು ಗಣ್ಯವ್ಯಕ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮದ್ರಸ ಶಿಕ್ಷಕರಾದ ಯಾಸೀನ್ ಸ ಅದಿ ಕಾರ್ಯಕ್ರಮವನ್ನು ನಿರೂಪಿಸಿದರು .

Leave a Reply

Your email address will not be published. Required fields are marked *

error: Content is protected !!