ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಪ್ರಮುಖ ಮೂವರು ಆರೋಪಿಗಳ ಬಂಧನ,
ಮಂಗಳೂರು: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳ ಬಂಧನವಾಗಿದೆ ಎಂದು ತನಿಖೆಯ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ ತಿಳಿಸಿದ್ದಾರೆ
ದ.ಕ ಜಿಲ್ಲಾ ಎಸ್ಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಡಿಜಿಪಿ, ಇಂದು ಬೆಳಗ್ಗೆ ಪ್ರಮುಖ ಹಂತಕರನ್ನು ಬಂಧಿಸಲಾಗಿದೆ ಎಂದರು. ಸುಳ್ಯದ ಸಿಯಾಬ್(33) ರಿಯಾಝ್ ಅಂಕತಡ್ಕ( 27) ಸುಳ್ಯದ ಬಷೀರ್(29) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ತಲಪಾಡಿ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದೆ. ಯಾವ ಕಡೆ ಇದ್ರು, ಯಾರು ಆಶ್ರಯ ಕೊಟ್ಟಿದ್ದಾರೆ. ಎಲ್ಲಾ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದು ಹೇಳಿದರು. ಯಾವ ಉದ್ದೇಶಕ್ಕೆ ಪ್ರವೀಣ್ ಕೊಲೆಯಾಗಿದೆ ಎಂದು ತನಿಖೆ ಮಾಡುತ್ತೇವೆ. ಪೊಲೀಸ್ ಕಸ್ಟಡಿಗೆ ಪಡೆಯುತ್ತೇವೆ ಎಂದು ಮಾಹಿತಿ ನೀಡಿದರು.
ಮೂರು ಜನರ ಸಮಗ್ರ ತನಿಖೆ ನಡೆಸಿ ಎನ್.ಐ.ಎ ಗೆ ಪ್ರಕರಣ ವಹಿಸುತ್ತೇವೆ. ಶತಾಯಗತಾಯವಾಗಿ ಈ ಪ್ರಕರಣ ಭೇದಿಸಬೇಕಾಗಿತ್ತು, ಜನರಲ್ಲಿಯೂ ಸಾಕಷ್ಟು ಆತಂಕವಿತ್ತು. ಪ್ರಕರಣ ಭೇದಿಸಲು ಸಾಕಷ್ಟು ಒತ್ತಡಗಳಿತ್ತು. ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಅಧಿಕಾರಿ ತಂಡಕ್ಕೆ ಬಹುಮಾನವೂ ಘೋಷಿಸಲಾಗುತ್ತೆ. ಆರೋಪಿಗಳಿಗೆ ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಜೊತೆ ಲಿಂಕ್ ಇರುವುದು ಗೊತ್ತಾಗಿದೆ. ತನಿಖೆಯಲ್ಲಿ ಈ ಬಗ್ಗೆ ಸಾಭೀತುಪಡಿಸಬೇಕಾಗಿದೆ. ಕೃತ್ಯ ನಡೆಸಿ ಕಾಸರಗೋಡಿನ ಮಸೀದಿಗೆ ಮೊದಲು ಹೋಗಿದ್ದಾರೆ. ತನಿಖೆಯಲ್ಲಿ ಎಲ್ಲಾ ವಿಚಾರವನ್ನು ಹೊರ ತರುತ್ತೇವೆ. ಬ್ಲ್ಯಾಕ್ ಸ್ಪ್ಲೆಂಡರ್ ಬೈಕ್ ಬಳಕೆ ಮಾಡಲಾಗಿದೆ. ಕಾರೊಂದನ್ನು ಸಹ ಬಳಕೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ಸಹ ವಶಪಡಿಸಿಕೊಳ್ಳುತ್ತೇವೆ. ಮುಂದೆ ಗಂಭೀರ ಪ್ರಕರಣ ಇದ್ದರೆ ವಾರೆಂಟ್ ಇಶ್ಯೂ ಮಾಡಿ ಆಸ್ತಿ ಮುಟ್ಟುಗೋಲು ಹಾಕುತ್ತೇವೆ. ಯಾವುದೇ ಅಮಾಯಕರ ಬಂಧನ ಮಾಡಲ್ಲ,
ಆದ್ರೆ ಕೃತ್ಯದಲ್ಲಿ ಭಾಗಿಯಾದವರೆಲ್ಲರನ್ನು ಬಂಧಿಸುತ್ತೇವೆ ಎಂದು ಮಾಹಿತಿ ನೀಡಿದರು.




