ನೋಡ ನೋಡುತ್ತಿದ್ದಂತೆ ಧರೆಗುರುಳಿದ ಮೂರು ಮಹಡಿಯ ಕಟ್ಟಡ – ಮಂಜೇಶ್ವರದ ವರ್ಕಾಡಿಯ ಸುಂಕದಕಟ್ಟೆ ಎಂಬಲ್ಲಿ ಘಟನೆ
ಮಂಜೇಶ್ವರ : ಭಾರೀ ಮಳೆಗೆ ಮೂರು ಮಹಡಿಯ ಕಟ್ಟಡ ಧರಶಾಹಿಯಾದ ಘಟನೆ ಕಾಸರಗೋಡಿನ ಮಂಜೇಶ್ವರದ ವರ್ಕಾಡಿಯ ಸುಂಕದಕಟ್ಟೆ ಎಂಬಲ್ಲಿ ನಡೆದಿದೆ.
ಮುಂಜಾಗ್ರತ ಕ್ರಮ ಕೈಗೊಂಡ ಹಿನ್ನೆಲೆ ಭಾರೀ ಅನಾಹುತ ತಪ್ಪಿದೆ. ಇಂದು ಬೆಳಗ್ಗೆ 10.15 ರ ವೇಳೆ ಕಟ್ಟಡ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲವೆಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆಯೇ ಕಟ್ಟಡ ಬಿರುಕು ಬಿಟ್ಟಿದ್ದು, ಈ ಹಿನ್ನೆಲೆ ಕಟ್ಟಡದಲ್ಲಿದ್ದ ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಸಲಾಗಿತ್ತು. ಬಿಜೆಪಿಯ ಸ್ಥಳೀಯ ಕಚೇರಿ ಕೂಡ ಇದೇ ಕಟ್ಟಡದಲ್ಲಿತ್ತು ಎನ್ನಲಾಗಿದೆ.
ಸದ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಹಿನ್ನೆಲೆ ಭಾರೀ ದುರಂತವೊಂದು ತಪ್ಪಿದೆ.





