ಶೇರ್ ಕೋಟ್: ದೇವಾಲಯದ ಅರ್ಚಕನ ಹತ್ಯೆ
ಬಿಜ್ನೂರ್ : ಶೇರ್ ಕೋಟ್ ಎಂಬಲ್ಲಿ ದೇವಾಲಯದ ವೃದ್ಧ ಅರ್ಚಕರೊಬ್ಬರನ್ನು ಶನಿವಾರ ಬೆಳಗಿನ ಜಾವಾ ದುಷ್ಕರ್ಮಿಗಳು ಹಲ್ಲೆ ನಡೆಸಿ ಹತ್ಯೆಗೈದ ಘಟನೆ ನಡೆದಿದೆ.
ಎಸ್ ಪಿ ದಿನೇಶ್ ಸಿಂಗ್ ಅವರು ಹತ್ಯೆಯ ಕುರಿತು ವಿವರ ನೀಡಿದ್ದು, ಬೆಗ್ರಾಮ್ ಎಂಬ 70 ವರ್ಷ ವಯಸ್ಸಿನ ಅರ್ಚಕ ಮನೋಕಾಮನಾ ಮಂದಿರದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತಿದ್ದ ವೇಳೆ ಬೆಳಗಿನ ಜಾವ 4.30ರ ಸುಮಾರಿಗೆ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ. ಬೆಗ್ರಾಮ್ ಅವರು ಕೂಗುತ್ತಿದ್ದಂತೆ, ಅವರ ಪತ್ನಿ ಹೊರಗೆ ಬಂದಿದ್ದು, ಅಷ್ಟರಲ್ಲಾಗಲೇ ದಾಳಿಕೋರರು ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.




