March 26, 2026

ಕೊಣಾಜೆ: ಕರ್ತವ್ಯದ ಸಮಯದಲ್ಲೇ ಹೃದಯಾಘಾತವಾಗಿ ಪೊಲೀಸ್ ಸಿಬ್ಬಂದಿ ಸಾವು

0
IMG-20220806-WA0009.jpg

ಕೊಣಾಜೆ: ಮಂಗಳೂರಿನ ಹೊರವಲಯದ ಕೊಣಾಜೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಜಗನ್ನಾಥ. ಪಿ ಅವರು ಕರ್ತವ್ಯದಲ್ಲಿದ್ದ ಸಂದರ್ಭ ಅಸ್ವಸ್ಥರಾದ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಜಗನ್ನಾಥ್ ಅವರು ಹಲವು ತಿಂಗಳಿನಿಂದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೂಲತಃ ಪುತ್ತೂರಿನ ಸವಣೂರು ಗ್ರಾಮದವರಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!