ಮಂಗಳೂರು: ಖಾಸಗಿ ಬಸ್ ನ ಪುಟ್ ಬೋರ್ಡಿನಲ್ಲಿ ನೇತಾಡಿಕೊಂಡು ವಿದ್ಯಾರ್ಥಿನಿಯರ ಅಪಾಯಕಾರಿ ಪ್ರಯಾಣ: ವಿಡಿಯೋ ವೈರಲ್
ಮಂಗಳೂರು: ತುಂಬಿ ತುಳುಕುವ ಖಾಸಗಿ ಬಸ್ ನ ಪುಟ್ ಬೋರ್ಡಿನಲ್ಲಿ ವಿದ್ಯಾರ್ಥಿನಿಯರು ನೇತಾಡಿಕೊಂಡು ಅಪಾಯಕಾರಿ ಪ್ರಯಾಣಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
ಬಸ್ ನಿರ್ವಾಹಕನೇ ವಿದ್ಯಾರ್ಥಿನಿಯರನ್ನು ತುಂಬಿ ಪುಟ್ ಬೋರ್ಡಿನಲ್ಲಿ ನೇತಾಡಿಕೊಂಡು ಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋ ತುಣುಕಿನಲ್ಲಿದೆ.
ಬಸ್ಸಿನ ಕೊರತೆಯಿಂದ ವಿದ್ಯಾರ್ಥಿಗಳ ಪರದಾಟ ಒಂದೆಡೆಯಾದರೆ , ಜೀವದ ಜೊತೆ ನಿರ್ಲಕ್ಷ್ಯ ವಹಿಸುವುದು ಈ ವಿಡಿಯೋದಲ್ಲಿ ಕಂಡುಬರುತ್ತದೆ.




