August 25, 2026

ಬೈಂದೂರು: ಕಾರಿನೊಳಗೆ ಕೂಡಿ ಹಾಕಿ ಸಜೀವ ದಹನ ಪ್ರಕರಣ, ನಾಲ್ವರು ಆರೋಪಿಗಳಿಗೆ ಆ. 16ರವರೆಗೆ ನ್ಯಾಯಾಂಗ ಬಂಧನ

0
image_editor_output_image886688189-1659677150456.jpg

ಬೈಂದೂರು: ಬೈಂದೂರಿನ ಒತ್ತಿನೆಣೆ ಸಮೀಪದಹೇನ್‌ಬೇರು ನಿರ್ಜನ ಪ್ರದೇಶದಲ್ಲಿ ಕಾರಿನೊಳಗೆ ಕಾರ್ಕಳದ ಆನಂದ ದೇವಾಡಿಗ (60) ಅವರನ್ನು ಕಾರಿನೊಳಗೆ ಕೂಡಿ ಹಾಕಿ ಸಜೀವ ದಹನ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಮತ್ತೆ ವಿಸ್ತರಿಸಲಾಗಿದೆ.

ಆ. 16ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕುಂದಾಪುರದ ಪ್ರಧಾನ ಸಿವಿಲ್‌ ನ್ಯಾಯಾಲಯ ಆದೇಶ ನೀಡಿದೆ.

ಕೊಲೆ ಪ್ರಕರಣದ ಆರೋಪಿಗಳಾದ ಸದಾನಂದ ಶೇರೆಗಾರ್‌ (52), ಶಿಲ್ಪಾ ಪೂಜಾರಿ (30) ಮತ್ತು ಅವರಿಗೆ ಸಹಕರಿಸಿದ ಸತೀಶ್‌ ದೇವಾಡಿಗ (49) ಹಾಗೂ ನಿತಿನ್‌ ದೇವಾಡಿಗ (35) ಅವರಿಗೆ ಕುಂದಾಪುರದ ಪ್ರಧಾನ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಧನೇಶ್‌ ಮುಗಳಿ ಅವರು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಪ್ರಾಸಿಕ್ಯೂಶನ್‌ ಪರ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಶ್ರೀ ವಾದಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!