February 2, 2026

ಹಳೆಯಂಗಡಿ: ನದಿಗೆ ಹಾರಿ ವೃದ್ಧೆ ಆತ್ಮಹತ್ಯೆ

0
image_editor_output_image2032808938-1659676996429.jpg

ಮಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ದೆಯೋರ್ವರು ಹಳೆಯಂಗಡಿ ಪಾವಂಜೆ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಳೆಯಂಗಡಿ ಲೈಟ್‌ಹೌಸ್‌ ನಿವಾಸಿ ನರ್ಸಿ (70) ಆತ್ಮಹತ್ಯೆ ಮಾಡಿಕೊಂಡವರು. ವೃದ್ದೆ ಕಳೆದ ಕೆಲವು ತಿಂಗಳುಗಳಿಂದೀಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಕುಟುಂಬದವರು ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪಡು ಪಣಂಬೂರು ವ್ಯಾಪ್ತಿಯ ಹೊಯ್ಗೆಗುಡ್ಡೆ ಬಳಿ ನಂದಿನಿ ನದಿ ತಟದಲ್ಲಿ ನರ್ಸಿ ಅವರ ಶವ ಗುರುವಾರ ಮಧ್ಯಾಹ್ನ ಪತ್ತೆಯಾಗಿತ್ತು. ಕೂಡಲೇ ಸ್ಥಳೀಯರು ಈ ವಿಚಾರವನ್ನು ಪಡು ಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಅವರ ಗಮನಕ್ಕೆ ತಂದರು. ಬಳಿಕ ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!