February 2, 2026

ಕಾಸರಗೋಡು: ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ನಿವೃತ್ತ ಶಿಕ್ಷಕಿಯ ಮೃತದೇಹ ಪತ್ತೆ

0
image_editor_output_image-996319340-1659633659492

ಕಾಸರಗೋಡು : ಮಳೆಯಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ತೋಡಿನಲ್ಲಿ ಕೊಚ್ಚಿ ಹೋಗಿದ್ದ ನಿವೃತ್ತ ಶಿಕ್ಷಕಿಯ ಮೃತ ದೇಹ ಆ. ೪ ರ ಇಂದು ಮಧ್ಯಾಹ್ನ ಪತ್ತೆಯಾಗಿದೆ. ಭೀಮನಡಿ ಕುರಕುಂಡ ದ ರವೀಂದ್ರ ನ್ ರವರ ಪತ್ನಿ ಲತಾ (57) ಮೃತಪಟ್ಟವರು. ಘಟನೆ ನಡೆದ ಅಲ್ಪ ದೂರದ ತೋಡಿ ನಲ್ಲಿ ಮೃತ ದೇಹ ಪತ್ತೆ ಯಾಗಿದೆ.

ಬುಧವಾರ ಬೆಳಿಗ್ಗೆ ಮನೆ ಸಮೀಪದ ಉಂಟಾದ ಪ್ರವಾಹಕ್ಕೆ ಸಿಲುಕಿ ಲತಾ ಸಮೀಪದ ತೋಡಿನಲ್ಲಿ ಕೊಚ್ಚಿ ಹೋಗಿದ್ದರು.ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು, ಪರಿಸರ ವಾಸಿಗಳು ಶೋಧ ನಡೆಸಿದ್ದರು. ಆದರೆ ಮೃತ ದೇಹ ಪತ್ತೆ ಯಾಗಿರಲಿಲ್ಲ . ಇಂದು ಬೆಳಿಗ್ಗೆ ಮತ್ತೆ ನಡೆಸಿದ ಶೋಧ ನಡೆಸಿದ್ದು, ಅಲ್ಪ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ. ವೆಳ್ಳರಿಕುಂಡು ಠಾಣಾ ಪೊಲೀಸರು ಪ್ರಕರಣ ಮಹಜರು ನಡೆಸಿದ್ದು, ಮೃತದೇಹವನ್ನು ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!