ಭಾರಿ ಮಳೆಗೆ ಭೂಕುಸಿತ: ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಘಾಟ್ ನಲ್ಲಿ ಭಾರಿ ವಾಹನಗಳ ಸಂಚಾರ ಸಂಪೂರ್ಣ ನಿಷೇಧ
ಸುಳ್ಯ: ಭಾರಿ ಮಳೆಗೆ ಭೂಕುಸಿತವಾಗಿರುವುದರಿಂದ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಘಾಟ್ ನಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಸಂಪಾಜೆ ಘಾಟ್‌ನ ಕೊಯನಾಡು, ದೇವರಕೊಲ್ಲಿ, ಮದೆನಾಡು ಭಾಗಗಳಲ್ಲಿ ರಸ್ತೆ ಮಧ್ಯೆ ಬಿರುಕು ಸಹ ಕಂಡುಬಂದಿವೆ. ಇದರಿಂದಾಗಿ ಭಾರಿ ವಾಹನ ಸಂಚಾರ ನಿರ್ಭಂಧಿಸಲಾಗಿದೆ. ಬಸ್ ಹಾಗೂ ಲಘುವಾಹನಗಳಿಗಷ್ಟೇ ಸಂಚಾರಕ್ಕೆ ಅನುಮತಿ ನೀಡಲಾಗಿದೆ.




