March 26, 2026

ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ ಮಸೂದೆ ಹಿಂಪಡೆದ ಕೇಂದ್ರ ಸರ್ಕಾರ

0
Screenshot_2022-08-04-11-07-07-57_680d03679600f7af0b4c700c6b270fe7.jpg

ಹೊಸದಿಲ್ಲಿ: ಜಂಟಿ ಸಂಸದೀಯ ಸಮಿತಿಯು (ಜೆಸಿಯು) ನೂತನ ಶಿಫಾರಸ್ಸುಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಮಂಡನೆಗೆ ಬಾಕಿ ಉಳಿದಿದ್ದ ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ 2019 (ಪಿಡಿಪಿ ಮಸೂದೆ) ಅನ್ನು ಕೇಂದ್ರ ಸರ್ಕಾರವು ಬುಧವಾರ ಹಿಂಪಡೆದಿದೆ.

ವ್ಯಕ್ತಿಗತವಾಗಿ ವೈಯಕ್ತಿಕ ದತ್ತಾಂಶಕ್ಕೆ ಸಂಬಂಧಿಸಿದ ಡಿಜಿಟಲ್‌ ಖಾಸಗಿತಕ್ಕೆ ರಕ್ಷಣೆ ನೀಡಲು ಮಂಡಿಸಲಾಗಿದ್ದ ಮಸೂದೆಯನ್ನು ಹಿಂಪಡೆಯುವ ಸಂಬಂಧ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನ್‌ ವೈಷ್ಣವ್‌ ಅವರು ಗೊತ್ತುವಳಿ ಮಂಡಿಸಿದರು. ಸಚಿವರ ಗೊತ್ತುವಳಿಯ ಹಿನ್ನೆಲೆಯಲ್ಲಿ ಸದನವು ಧ್ವನಿಮತದ ಮೂಲಕ ಮಸೂದೆ ಹಿಂಪಡೆಯಲು ಒಪ್ಪಿಗೆ ಸೂಚಿಸಿತು.

ಡಿಜಿಟಲ್‌ ವ್ಯವಸ್ಥೆಗೆ ಪೂರಕವಾಗಿ ಸಮಗ್ರ ಕಾನೂನು ಚೌಕಟ್ಟು ರೂಪಿಸಲು ಮಸೂದೆಗೆ 81 ತಿದ್ದುಪಡಿ ಪ್ರಸ್ತಾವ ಸಲ್ಲಿಸಲಾಗಿದ್ದು, 12 ಶಿಫಾರಸ್ಸುಗಳನ್ನು ಮಾಡಲಾಗಿದೆ. ಜೆಸಿಪಿಯ ವರದಿ ಪರಿಗಣಿಸಿ ಮಸೂದೆ ಹಿಂಪಡೆಯಲು ನಿರ್ಧರಿಸಲಾಗಿದ್ದು, ಹೊಸ ಮಸೂದೆಯನ್ನು ಮಂಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!