March 26, 2026

ಮಳೆಹಾನಿ: ಪರಿಹಾರ ಪಡೆದವರಿಗೆ ಮತ್ತೆ ಪರಿಹಾರ ಇಲ್ಲ: ರಾಜ್ಯ ಸರಕಾರ ಆದೇಶ

0
image_editor_output_image-1798586397-1659508211627.jpg

ಬೆಂಗಳೂರು : ಕಳೆದ ಮೂರು ವರ್ಷದಲ್ಲಿ ಸಂಭವಿಸಿದ ಮಳೆಯಿಂದ ಮನೆ ಕಳೆದುಕೊಂಡು‌ ಪರಿಹಾರ ಪಡೆದವರ ಮನೆಗೆ ಈ ವರ್ಷ ಮತ್ತೆ ಹಾನಿಯಾದರೆ ಪರಿಹಾರ‌ ಕೊಡುವಂತಿಲ್ಲ‌ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

ಈ ಬಗ್ಗೆ ಕೆಲವು ಜಿಲ್ಲಾಧಿಕಾರಿಗಳು ಪತ್ರ ಬರೆದು ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ  ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗದಿಂದ ಈ ಸ್ಪಷ್ಟನೆ ನೀಡಲಾಗಿದೆ.

2019, 2020, 2021 ನೇ ವರ್ಷದಲ್ಲಿ ಎ ಅಥವಾ ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಸಂತ್ರಸ್ತರ ಮನೆಗಳಿಗೆ ಈ ಸಾಲಿನಲ್ಲಿ‌ ಮತ್ತೆ ಪರಿಹಾರ‌ ನೀಡುವುದಕ್ಕೆ ಅವಕಾಶವಿಲ್ಲ.

ಆದರೆ ಈ ವರ್ಷಗಳಲ್ಲಿ ಅಲ್ಪಸ್ವಲ್ಪ ಹಾನಿಗೊಳಗಾದ ಸಿ ಕೆಟಗರಿಯಲ್ಲಿ  ಐವತ್ತು ಸಾವಿರ ರೂ. ಪಡೆದ ಮನೆಗಳಿಗೆ ಈ ಬಾರಿ ಎ,ಬಿ,ಸಿ ವಿಭಾಗದಲ್ಲಿ ಪರಿಹಾರ ಪಾವತಿಸಬಹುದು.

Leave a Reply

Your email address will not be published. Required fields are marked *

error: Content is protected !!