ಭಟ್ಕಳ: ಗುಡ್ಡ ಕುಸಿದು ಅವಶೇಷದಡಿಯಲ್ಲಿ ಸಿಲುಕಿದ್ದ ನಾಲ್ವರು ಮೃತ್ಯು
ಭಟ್ಕಳ: ಭಾರೀ ಮಳೆಯಿಂದ ಮನೆಯ ಮೇಲೆ ಗುಡ್ಡ ಕುಸಿದು ಅವಶೇಷದಡಿಯಲ್ಲಿ ಸಿಲುಕಿದ್ದ ನಾಲ್ವರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.
ಮನೆಯೊಳಗೆ ಮಲಗಿದ್ದ ಲಕ್ಷ್ಮೀ ನಾರಾಯಣ ನಾಯ್ಕ, ಅನಂತ ನಾಯ್ಕ, ಪ್ರವೀಣ ನಾಯ್ಕ ಹಾಗೂ ಲಕ್ಷ್ಮೀ ನಾಯ್ಕ ಇವರ ಮೃತ ದೇಹವನ್ನು ಹೊರ ತೆಗೆಯಲಾಗಿದೆ. ಮನೆಯು ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ಎಲ್ಲ ನಾಲ್ವರೂ ಮೃತ ಪಟ್ಟಿದ್ದಾರೆ.
ಮೇಘಸ್ಪೋಟದಿಂದಾಗಿ ಭಟ್ಕಳದಲ್ಲಿ ಎಲ್ಲಾ ಕಡೆಗಳಲ್ಲಿಯೂ ನೀರು ತುಂಬಿ ಭಾರೀ ಅನಾಹುತವಾಗಿದೆ.
ಬೆಳಿಗ್ಗೆ ಸುದ್ದಿ ತಿಳಿಯುತ್ತಲೇ ಭಟ್ಕಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು, ಎನ್.ಡಿ.ಆರ್.ಎಫ್. ತಂಡವನ್ನು ಸಹ ಭಟ್ಕಳಕ್ಕೆ ಕಳುಹಿಸಿದ್ದು ಶಿರಾಲಿ ಭಾಗದಲ್ಲಿ ಅನೇಕ ಮನೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.




