March 26, 2026

7 ಮಂದಿಯ ಹತ್ಯೆಗೆ ಸ್ಕೆಚ್ ಹಾಕಿದ್ದ ಸುರತ್ಕಲ್ ಫಾಝಿಲ್ ಕೊಲೆ ಆರೋಪಿಗಳು

0
image_editor_output_image293007543-1659426795173.jpg

ಸುರತ್ಕಲ್: ಫಾಝಿಲ್ ಕೊಲೆ ಆರೋಪಿಗಳಾದ ಬಂಧಿತರನ್ನು ಬಜ್ಪೆ ನಿವಾಸಿ ಸುಹಾಸ್ ಶೆಟ್ಟಿ (29), ಕುಳಾಯಿಯ ಮೋಹನ್ ಅಲಿಯಾಸ್ ನೇಪಾಲಿ ಮೋಹನ್, ಮೋಹನ್ ಸಿಂಗ್ (26), ಗಿರಿಧರ್ (23), ಸುರತ್ಕಲ್ ನ ಅಭಿ಼ಷೇಕ್(21), ಶ್ರೀನಿವಾಸ್(23), ದೀಕ್ಷಿತ್(21) ಎಂಬ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಈ ಎಲ್ಲಾ ಆರೋಪಿಗಳು ನೇರವಾಗಿ ಹತ್ಯಾ ಪ್ರಕರಣದಲ್ಲಿ ಭಾಗಿಯಾಗಿದ್ದು ಜು. 26ರಂದು ರಾತ್ರಿಯಿಂದಲೇ ಎಲ್ಲರೂ ಒಬ್ಬರಿಗೊಬ್ಬರು ಮಾತನಾಡಿಕೊಂಡು ಸುಮಾರು 7 ಮಂದಿಯನ್ನು ಗುರಿಯಾಗಿಸಿಕೊಂಡು ಹತ್ಯೆಗೆ ಮುಂದಾಗಿದ್ದರು. ಕೊನೆಗೆ ಮೇ 28ರಂದು ಫಾಝಿಲ್ ಅವರನ್ನೇ ಗುರಿಯಾಗಿಸಿ ಹತ್ಯೆಗೆ ಸಂಚು ಹಾಕಿದ್ದರು. ಹತ್ಯೆಗೆ ನಿಖರ ಕಾರಣ ಮುಂದಿನ ತನಿಖೆಯಿಂದ ತಿಳಿದು ಬರಲಿದೆ.

ಹತ್ಯೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಇಂದು ಮುಂಜಾನೆ 5.30ರ ವೇಳೆಗೆ ಉದ್ಯಾವರ ಬಳಿ ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!