January 31, 2026

ಚಿಕ್ಕಬಳ್ಳಾಪುರ: 15ಕ್ಕೂ ಹೆಚ್ಚು ಜನರ ಮೇಲೆ ಚಾಕುವಿನಿಂದ ಇರಿದ ಅಪರಿಚಿತ ವ್ಯಕ್ತಿ

0
image_editor_output_image-1317027946-1659331686080.jpg

ಚಿಕ್ಕಬಳ್ಳಾಪುರ: ನಗರದಲ್ಲಿ ಭಾನುವಾರ ರಾತ್ರಿ 10ರ ಸುಮಾರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 15ಕ್ಕೂ ಹೆಚ್ಚು ಜನರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ನಗರಸಭೆ, ಕಾರ್ಖಾನೆ ಪೇಟೆ, ಬಿಬಿ ರಸ್ತೆ, ಅಂಬಿಕಾ ಮೆಡಿಕಲ್ಸ್ ಮತ್ತಿತರ ಪ್ರದೇಶದಲ್ಲಿ ನಿಂತಿದ್ದವರಿಗೆ ಚಾಕುವಿನಿಂದ ಚುಚ್ಚಿ ಪರಾರಿ ಆಗಿದ್ದಾನೆ. ಬೈಕ್ ನಲ್ಲಿ ವೇಗವಾಗಿ ತೆರಳುತ್ತಿದ್ದ ಅಪರಿಚಿತ ಒಂದು ಕೈಯಲ್ಲಿ ಚಾಕು ಹಿಡಿದು ದಾರಿಯಲ್ಲಿ ಸಿಕ್ಕ ಸಿಕ್ಕವರಿಗೆ ಚುಚ್ಚಿದ್ದಾನೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚು ಗಾಯಗೊಂಡಿರುವ ವ್ಯಕ್ತಿಯೊಬ್ಬರನ್ನು ಬೆಂಗಳೂರಿನ‌ ಆಸ್ಪತ್ರೆ ಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಒಬ್ಬರಿಗೆ ಕಣ್ಣಿನ ಗುಡ್ಡೆ ಕಿತ್ತು ಬಂದಿದೆ.

ನಗರಸಭೆಯ ವೃತ್ತದಲ್ಲಿ ನಿಂತಿದ್ದೆವು. ಏಕಾಏಕಿ ಬೈಕ್ ನಲ್ಲಿ ಬಂದು ಚುಚ್ಚಿ ಪರಾರಿಯಾದ ಎಂದು ಗಾಯಾಳು ಒಬ್ಬರು ತಿಳಿಸಿದರು.ಪೊಲೀಸರು ಅಪರಿಚಿತನ ಹುಡುಕಾಟ ನಡೆಸಿದ್ದಾರೆ. ಗಾಯಗಳು ದಾಖಲಾಗಿರುವ ಆಸ್ಪತ್ರೆ ಗಳ ಮುಂದೆ ಜನರು ಜಮಾಯಿಸಿದ್ದರು.

ಅಪರಿಚಿತ ವ್ಯಕ್ತಿ ಗಾಂಜಾ ಸೇವಿಸಿದ್ದ ಎಂದು ಜನರು ಚರ್ಚೆ ನಡೆಸಿದ್ದಾರೆ. ಇಬ್ಬರು ಗಾಯಾಳುಗಳನ್ನು ಬೆಂಗಳೂರಿನ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!