2ನೇ ಪತ್ನಿ ಜೊತೆ ಸೇರಿ 7 ತಿಂಗಳ ಮಗುವನ್ನು ಕೊಂದು ಹೊಲದಲ್ಲಿ ಹೂತು ಹಾಕಿದ ತಂದೆ
ಲಖನೌ: ಪತಿ, ಎರಡನೇ ಪತ್ನಿ ಜೊತೆ ಸೇರಿ ಏಳು ತಿಂಗಳ ತನ್ನ ಮಗುವನ್ನು ಕೊಂದು ಹೊಲದಲ್ಲಿ ಹೂತು ಹಾಕಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೋಟಾರ್ ಮೆಕ್ಯಾನಿಕ್ ಸಂಜಯ್ ಮತ್ತು ಅವರ ಎರಡನೇ ಪತ್ನಿ ಮೀನಾ ಅವರನ್ನು ಬುಧವಾರ ಸಂಜೆ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ತಲೆಗೆ ಗಾಯ ಮತ್ತು ಎಡಗೈ ಮುರಿದಿರುವುದು ಕಂಡು ಬಂದಿದೆ.
ಎರಡನೇ ಪತ್ನಿ ಮೀನಾ ಅವರ ಒತ್ತಾಯದ ಮೇರೆಗೆ ತನ್ನ ಮಾಜಿ ಪತಿ ಸಂಜಯ್ ಮಗುವನ್ನು ಕೊಂದಿದ್ದಾನೆ ಎಂದು ಬಾಲಕಿಯ ತಾಯಿ ಮತ್ತು ಸಂಜಯ್ ಮೊದಲ ಪತ್ನಿ ಪ್ರಮೀಳಾ ಹೇಳಿರುವುದಾಗಿ ಎಫ್‌ಐಆರ್‌ನಲ್ಲಿ ದಾಖಲಾಗಿದೆ.




