November 21, 2024

ಫೇಸ್‌ಬುಕ್‌ನಲ್ಲಿ ನಾಯಿ ಖರೀದಿಸಲು ಹೋಗಿ 28 ಸಾವಿರ ರೂ. ಕಳೆದುಕೊಂಡ ಯುವಕ

0

ಬೆಂಗಳೂರು: ಇಲ್ಲೊಬ್ಬ ಯುವಕ ಫೇಸ್‌ಬುಕ್‌ನಲ್ಲಿ ನಾಯಿ ಖರೀದಿಸಲು ಹೋಗಿ 28 ಸಾವಿರ ರೂ. ಕಳೆದುಕೊಂಡಿದ್ದಾನೆ.

ತ್ಯಾಗರಾಜನಗರದ ನಿವಾಸಿ ಅನೀಶ್‌ (17) ವಂಚನೆಗೊಳಗಾದವನು.

ಇತ್ತೀಚೆಗೆ ಅನೀಶ್‌ ಎಫ್ಬಿಯಲ್ಲಿ ಎಂದಿನಂತೆ ಸ್ನೇಹಿತರ ಜತೆಗೆ ಚಾಟ್‌ ಮಾಡುತ್ತಿದ್ದ. ಆ ವೇಳೆ ಕಡಿಮೆ ಬೆಲೆಗೆ ನಾಯಿ ಮರಿ ಮಾರಾಟ ಮಾಡುವುದಾಗಿ ನಾಯಿಯ ಭಾವಚಿತ್ರ ಸಹಿತ ಹಾಕಿರುವ ಜಾಹಿರಾತನ್ನು ಗಮನಿಸಿದ್ದ.

ಕೂಡಲೇ ಜಾಹಿರಾತಿನಲ್ಲಿ ನಮೂದಿಸಲಾದ ನಂಬರ್‌ಗೆ ಕರೆ ಮಾಡಿ ನಿಮ್ಮ ನಾಯಿಯನ್ನು ಖರೀದಿಸುವುದಾಗಿ ಹೇಳಿದ್ದ. ಮೊದಲು ನನ್ನ ಬ್ಯಾಂಕ್‌ ಖಾತೆಗೆ ಹಣ ಕಳುಹಿಸಿದರೆ ಮಾತ್ರ ನಾಯಿ ಮಾರುವುದಾಗಿ ಮಾಲೀಕ ಷರತ್ತು ವಿಧಿಸಿದ್ದ. ಅದರಂತೆ ಆತ ಹೇಳಿದ ಬ್ಯಾಂಕ್‌ ಖಾತೆಗೆ ಅನೀಶ್‌ ಹಂತ-ಹಂತವಾಗಿ 28 ಸಾವಿರ ರೂ. ಜಮೆ ಮಾಡಿದ್ದ. ‌

Leave a Reply

Your email address will not be published. Required fields are marked *

error: Content is protected !!