November 12, 2026

ಪುತ್ತೂರು ಟಿಪ್ಪರ್ ವೆಲ್ಫೇರ್ ಅಸೋಸಿಯೇಷನ್ ಟ್ರಸ್ಟ್ ರಚನೆ: ನೂತನ ಪದಾಧಿಕಾರಿಗಳ ಆಯ್ಕೆ

0
IMG-20261111-WA0078

ಪುತ್ತೂರು ಟಿಪ್ಪರ್ ವೆಲ್ಫೇರ್ ಅಸೋಸಿಯೇಷನ್ ಟ್ರಸ್ಟ್ ರಚನೆ: ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಪುತ್ತೂರು ತಾಲೂಕಿನ ಟಿಪ್ಪರ್ ಮಾಲೀಕರ ಹಿತರಕ್ಷಣೆ ಹಾಗೂ ಅವರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಪುತ್ತೂರು ಟಿಪ್ಪರ್ ವೆಲ್ಫೇರ್ ಅಸೋಸಿಯೇಷನ್ (ರಿ) ಟ್ರಸ್ಟ್ ಅನ್ನು ರಚಿಸಲಾಗಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನ. 8ರಂದು ಸಂಜೆ ನೆಹರೂ ನಗರದ ಉಪಾಧ್ಯಾಯ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.

ಟ್ರಸ್ಟ್‌ನ ಗೌರವ ಅಧ್ಯಕ್ಷರಾಗಿ ಬಾತೀಶ್ ಪಾಟ್ರಕೋಡಿ, ಅಧ್ಯಕ್ಷರಾಗಿ ಖಾದರ್ ಕನ್ಝ್, ಪ್ರಧಾನ ಕಾರ್ಯದರ್ಶಿಯಾಗಿ ಝಾಕಿರ್ ಹುಸೇನ್ ಬನ್ನೂರು ಹಾಗೂ ಕೋಶಾಧಿಕಾರಿಯಾಗಿ ದಿನೇಶ್ ಕಾವೇರಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ರಿಯಾಝ್ ಮತ್ತು ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಒಟ್ಟು 11 ಮಂದಿ ಪದಾಧಿಕಾರಿಗಳು ಹಾಗೂ 40 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು.

ಪುತ್ತೂರು ತಾಲೂಕಿನ ಟಿಪ್ಪರ್ ಮಾಲೀಕರ ಹಿತಾಸಕ್ತಿ ಕಾಪಾಡುವುದು, ಮರಳು, ಜಲ್ಲಿ, ಎಂ-ಸ್ಯಾಂಡ್, ಕಲ್ಲು ಹಾಗೂ ಮಣ್ಣಿನ ಸಾಗಾಟ ದರವನ್ನು ನಿಗದಿಪಡಿಸುವುದು, ಆರ್‌ಟಿಒ, ಪೊಲೀಸ್ ಇಲಾಖೆ, ಗಣಿ ಇಲಾಖೆ, ಕ್ವಾರಿ, ಕ್ರಷರ್ ಹಾಗೂ ಮರಳು ಸಾಗಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಸದಸ್ಯರಿಗೆ ನೆರವಾಗುವುದು ಟ್ರಸ್ಟ್‌ನ ಪ್ರಮುಖ ಉದ್ದೇಶಗಳಾಗಿವೆ. ಅಲ್ಲದೆ, ಚಾಲಕರಿಗೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅಗತ್ಯ ಸಹಕಾರ ನೀಡುವ ಉದ್ದೇಶವನ್ನೂ ಹೊಂದಿದೆ.

ಸಭೆಯಲ್ಲಿ ದಿನೇಶ್ ಕಾವೇರಿ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!