March 26, 2026

ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಪತಿ, ಪತ್ನಿ ಸಾವು

0
image_editor_output_image1748535841-1658911319214.jpg

ಚಿಂಚೋಳಿ: ನೆರೆಯ ತೆಲಂಗಾಣ ರಾಜ್ಯದ ಮಂತಟ್ಟಿ ಗ್ರಾಮದ ದಂಪತಿ ತಾಲ್ಲೂಕಿನ‌ ಜಟ್ಟೂರು ಗ್ರಾಮದ ಬಳಿ ಕಾಗಿಣಾ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಬುಧವಾರ ಬೆಳಿಗ್ಗೆ ಶವವಾಗಿ ಪತ್ತೆಯಾದರು.

ಬುಗ್ಗಪ್ಪ‌ ನರಸಮ್ಮ( 60) ಮತ್ತು ಯಾದಮ್ಮ‌ ಬುಗ್ಗಪ್ಪ (55) ನದಿ ಪ್ರವಾಹಕ್ಕೆ ಸಿಲುಕಿ ಮೃತರಾದವರು. ತರಕಾರಿ ಮಾರಲು ಬಶೀರಾಬಾದ್‌ಗೆ ತೆರಳಿದ್ದ ದಂಪತಿ, ಮರಳಿ ಮಂತಟ್ಟಿಗೆ ಬರುತ್ತಿದ್ದಾಗ ಕಾಗಿಣಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನೀರಲ್ಲಿ ಕೊಚ್ಚಿ ಹೋಗಿದ್ದವರ ಪೈಕಿ ಮಹಿಳೆಯ ದೇಹ ಮಂಗಳವಾರ ಕಾಣಿಸಿತ್ತು. ಆದರೆ, ಪೊಲೀಸರು ಅಲ್ಲಿಗೆ ತೆರಳುವಷ್ಟರಲ್ಲಿ ಅದು ಮುಂದಕ್ಕೆ ಹೋಗಿತ್ತು. ಬುಧವಾರ ಬೆಳಿಗ್ಗೆ ಪ್ರವಾಹ ತಗ್ಗಿದ್ದರಿಂದ ದಂಪತಿ ಮೃತದೇಹಗಳು ಜಟ್ಟೂರು ಸಮೀಪದಲ್ಲಿ ಸಿಕ್ಕಿವೆ.

ಮೃತರ ಪುತ್ರ ವೆಂಕಟಪ್ಪ‌ ಅವರು ದೇಹಗಳನ್ನು ಗುರುತಿಸಿದರು ಎಂದಿದ್ದಾರೆ.
ಸುಲೇಪೇಟ ಸಬ್‌ ಇನ್‌ಸ್ಪೆಕ್ಟರ್ ಸುಖಾನಂದ ಸಿಂಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!