ಬಿ.ಸಿ ರೋಡ್ ಪ್ರಕರಣದ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಾತ್ಮಕ ಪೋಸ್ಟ್: ವಾಟ್ಸಾಪ್ ಗ್ರೂಫ್ ಮತ್ತು INSTAGRAM ಖಾತೆಗಳ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ: ನಗರ ಠಾಣಾ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಪ್ರಚೋದನಾತ್ಮಕ ಪೋಸ್ಟ್ ಪ್ರಸಾರ ಮಾಡಿದ್ದು, ಕೆಲವೊಂದು ಇನ್ಸ್ಟಾಗ್ರಾಂ, ವಾಟ್ಸಪ್ ಗ್ರೂಪ್ ಗಳ ಮೇಲೆ ಪ್ರಕರಣ ದಾಖಲಾಗಿದೆ.
ನಗರ ಠಾಣಾ ಅ.ಕ್ರ 95/2026 U/S 78 126,103 ಬಿ.ಎನ್.ಎಸ್, 2023 ಮತ್ತು ಕಲಂ: 25,27,ಆರ್ಮ್ಸ್ ಆಕ್ಟ್ ಗೆ ಸಂಬಂದಿಸಿದಂತೆ ದಾಖಲಾದ ಪ್ರಕರಣ ಕುರಿತು ವಿವಿಧ ವಾಟ್ಸ್ಆಪ್ ಗ್ರೂಪ್ಗಳು ಹಾಗೂ ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ಆರೋಪಿಯ ಭಾವಚಿತ್ರಕ್ಕೆ ಕೇಸರಿ ಶಾಲು ಹಾಗೂ ಕುಂಕುಮವನ್ನು ಅಳವಡಿಸಿ, ಭಜರಂಗದಳದ ಕಾರ್ಯಕರ್ತ ಎಂದು ಎಡಿಟ್ ಮಾಡಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ಬರಹಗಳನ್ನು ಹಾಕಿರುವುದಕ್ಕೆ ಸಂಬಂದಿಸಿದಂತೆ 1) troll_master.__Instagram Account 2) Yuva Belthangady Whatsappgroup 3) PPadmaraj Padmarajpari Whatsapp group 4) Padmaraj Padmaraj pariWhatsapp group 5)Yuva CongressBelthangady Whatsappgroup 6) Facts and Justice Whatsappgroup ಗಳ ವಿರುದ್ದ ಅ.ಕ್ರ: 96/2026 ಕಲಂ: 196, 353(2) BNS-2023 ಪ್ರಕರಣ ದಾಖಲಾಗಿದೆ.
ಫೇಸ್ ಬುಕ್ ನಲ್ಲಿ Shailaja Amarnath ಎಂಬವರ ಖಾತೆಯಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಫೋಸ್ಟ್ ಹಾಕಿರುವ ಬಗ್ಗೆ ಅ.ಕ್ರ: 97/2026 ಕಲಂ: 353(2) BNS-2023 ಪ್ರಕರಣ ದಾಖಲಾಗಿರುತ್ತದೆ.
Chethan Belchada ಎಂಬ ಪೇಸ್ ಬುಕ್ ಖಾತೆಯಲ್ಲಿ ಆರೋಪಿಯ ಪೋಟೋವನ್ನು ಕಾಂಗ್ರೆಸ್ ಪಾರ್ಟಿಯ ಕಾರ್ಯಕರ್ತೆನೆಂದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣಾ 98/2026 ಕಲಂ: 353(2) BNS-2023 ರಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಮೇಲಿನ 3 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




