ಬೆಳ್ತಂಗಡಿ: ಬಾಲಕಿಯ ಮೇಲೆ ಅತ್ಯಾಚಾರದ ಆರೋಪಕ್ಕೆ ಇಬ್ಬರ ಮೇಲೆ ಹಲ್ಲೆಗೆ ಟ್ವಿಸ್ಟ್: ಇಬ್ಬರ ಮೇಲೆ ಹಲ್ಲೆಗೆ ಜಾಗದ ವಿಚಾರ ಕಾರಣ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ; ಇಲ್ಲಿನ ಇಂದಬೆಟ್ಟು ಗ್ರಾಮದ ಶಾಂತಿನಗರ ಎಂಬಲ್ಲಿ ಬಾಲಕಿಯ ಮೇಲೆ ಅತ್ಯಾಚಾರದ ಆರೋಪಕ್ಕೆ ಇಬ್ಬರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ಇಬ್ಬರ ಮೇಲೆ ಹಲ್ಲೆಗೆ ಜಾಗದ ವಿಚಾರ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಯಿಂದಾಗಿ ಮೃತಪಟ್ಟ ಜಾರಪ್ಪ ನಾಯ್ಕ ಅವರ ಪುತ್ರ ರಾಜಶೇಖರ್ ನಾಯ್ಕ ಅವರು ಈ ಬಗ್ಗೆ ದೂರು ನೀಡಿದ್ದಾರೆ.
ಬೆಳ್ತಂಗಡಿಯ ಇಂದಬೆಟ್ಟು ಗ್ರಾಮದ ಶಾಂತಿನಗರ ಎಂಬಲ್ಲಿ ಜಮೀನಿದ್ದು ಸದ್ರಿ ಜಮೀನಿನಲ್ಲಿ ಜಾರಪ್ಪ ನಾಯ್ಕ ಅವರ ಸಹೋದರ ನಾರಾಯಣ ನಾಯ್ಕ ವಾಸವಾಗಿದ್ದು ನಿನ್ನೆ 6.15ರ ವೇಳೆಗಡ ಜಾರಪ್ಪ ನಾಯ್ಕ ಅವರ ಮಗ ರಾಜಶೇಖರ್ ನಾಯ್ಕ ಅವರ ಮೊಬೈಲ್ ಗೆ ವಿಜಯ ಎಂಬವರು ಕರೆಮಾಡಿ ನಿನ್ನ ಚಿಕ್ಕಪ್ಪ ಹಾಗೂ ಇತರರಿಗೆ ಶಾಂತಿನಗರ ಎಂಬಲ್ಲಿ ಗಲಾಟೆ ಆಗುತ್ತಿದ್ದು ನೀನು ಕೂಡಲೇ ಬಾ ಎಂದು ತಿಳಿಸಿದ್ದಾರೆ.
ಅದರಂತೆ ರಾಜಶೇಖರ್ ನಾಯ್ಕ ಹಾಗೂ ಅವರ ತಂದೆ ಜಾರಪ್ಪ ನಾಯ್ಕ ರವರು ಘಟನಾ ಸ್ಥಳಕ್ಕೆ ಹೋಗಿ ನೋಡಿದ್ದಾರೆ. ಆಗ ಆರೋಪಿಗಳಿಗೆ ಮತ್ತು ನಾರಾಯಣ ನಾಯ್ಕ ರವರಿಗೆ ಗಲಾಟೆ ಆಗುತ್ತಿತ್ತು.
ಇದನ್ನು ನೋಡಿದ ಜಾರಪ್ಪ ನಾಯ್ಕ ರವರು ನೀವುಗಳು ಯಾಕೇ ಗಲಾಟೆ ಮಾಡುತ್ತೀರಿ ಎಂದು ವಿಚಾರಿಸಿದಾಗ ಆರೋಪಿಗಳು ನಿನ್ನ ತಮ್ಮ ನಾರಾಯಣ ನಾಯ್ಕ ಇಲ್ಲಿ ಇರಬಾದೆಂದು ತಗಾದೆ ತೆಗೆದು ವಾಗ್ವಾದವಾಗಿ ಆರೋಪಿಗಳ ಪೈಕಿ ಮನೋಹರ ಗೌಡ ಎಂಬವನು ಜಾರಪ್ಪ ನಾಯ್ಕ ರವರನ್ನು ಕೈಯಿಂದ ದೂಡಿದಾಗ ಅವರು ನೆಲಕ್ಕೆ ಬೀಳುವ ಹಂತದಲ್ಲಿರುವಾಗ ಮಗ ರಾಜಶೇಖರ್ ನಾಯ್ಕ ಜಾರಪ್ಪ ನಾಯ್ಕ ರವರನ್ನು ಹಿಂದಿನಿಂದ ಕೆಳಕ್ಕೆ ಬೀಳದಂತೆ ಹಿಡಿದುಕೊಂಡಾಗ ಜಾರಪ್ಪ ನಾಯ್ಕ ರವರು ತೀವ್ರ ಅಸ್ವಸ್ಥಗೊಂಡಿದ್ದಾರೆ.
ಕೂಡಲೇ ಆಸ್ಪತ್ರೆಗೆ ವಾಹನವೊಂದಲ್ಲಿ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಯವರಲ್ಲಿ ತಪಾಸಣೆಗೆ ಒಳಪಡಿಸಿದಾಗ ಜಾರಪ್ಪ ನಾಯ್ಕ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳಿಗೆ ಜಾರಪ್ಪ ನಾಯ್ಕ ರವರು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯೆಂದು ಗೊತ್ತಿದ್ದರೂ ಕೂಡಾ ಹಲ್ಲೆ ನಡೆಸಲು ಮುಂದಾಗಿ ಜಾರಪ್ಪ ನಾಯ್ಕ ರವರ ಮರಣಕ್ಕೆ ಕಾರಣವಾಗಿದ್ದಾರೆ ಎಂದು ಚಂದ್ರಕಾಂತ ನಾಯ್ಕ ಮನೋಹರ ಗೌಡ, ಹರಿಪ್ರಸಾದ ಪೂಜಾರಿ
ದೀಪಕ್ ಶೆಟ್ಟಿ ಎಂಬವರ ವಿರುದ್ಧ ಮೃತ ಜಾರಪ್ಪ ನಾಯ್ಕರ ಮಗ ರಾಜಶೇಖರ್ ನಾಯ್ಕ ದೂರು ದಾಖಲಿಸಿದ್ದಾರೆ.




