ಇರಾನ್ ಬರಪೀಡಿತದಲ್ಲಿ ಭಾರೀ ಪ್ರವಾಹ: 17 ಜನರು ಮೃತ್ಯು
ಟೆಹರಾನ್: ಇರಾನ್‌ನ ಬರಪೀಡಿತ ದಕ್ಷಿಣ ಫಾರ್ಸ್ ಪ್ರಾಂತ್ಯದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಎಂದು ಶನಿವಾರ ವರದಿಯಾಗಿದೆ.
ಭಾರಿ ಮಳೆಯಿಂದಾಗಿ ಎಸ್ತಾಬಾನ್ ನಗರದ ರೌದ್‌ಬಾಲ್ ನದಿಯಲ್ಲಿ ಪ್ರವಾಹ ಉಂಟಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಿ 55 ಜನರನ್ನು ರಕ್ಷಿಸಲಾಗಿದೆ. ಕನಿಷ್ಠ 6 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಗವರ್ನರ್ ಯೂಸೆಫ್ ಕರೆಗರ್ ತಿಳಿಸಿದ್ದಾರೆ.
ದಶಕಗಳಿಂದಲೂ ಬರ ಪರಿಸ್ಥಿತಿ ಎದುರಿಸುತ್ತಿರುವ ದೇಶದಲ್ಲಿ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಇರಾನ್ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಫಾರ್ಸ್ ಪ್ರಾಂತ್ಯದಲ್ಲಿ 2018ರ ಮಾರ್ಚ್‌ನಲ್ಲಿ ಉಂಟಾಗಿದ್ದ ಹಠಾತ್ ಪ್ರವಾಹದಿಂದ 44 ಮಂದಿ ಸಾವಿಗೀಡಾಗಿದ್ದರು.




